ನೀರಿನ ಟ್ಯಾಂಕರ್ ವಿರುದ್ಧ 595 ಕೇಸ್

traffic
Published on

ಬೆಂಗಳೂರು: ಸಿಲಿಕಾನ್‌ಸಿಟಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುವ ಆರೋಪದ ಮೇಲೆ ನೀರಿನ ಟ್ಯಾಂಕರ್‌ಗಳ ವಿರುದ್ಧ ಸಂಚಾರ ಪೊಲೀಸರು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ನೀರಿನ ಟ್ಯಾಂಕರ್ ಚಾಲಕರ ವಿರುದ್ಧ ನಗರದ ಎಲ್ಲೆಡೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 595 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಚಾಲಕರು ಮತ್ತು ಮಾಲೀಕರಿಂದ 3.33 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಸಮವಸ ಧರಿಸದಿರುವುದು, ಸೀಟ್ ಬೆಲ್ಟ್ ರಹಿತ ಚಾಲನೆ, ನೋ ಎಂಟ್ರಿ, ದೋಷಪೂರಿತ ಸಂಖ್ಯಾಲಕ, ಶಿಸ್ತುಪಥ ಉಲ್ಲಂಘನೆ, ನೋ ಪಾರ್ಕಿಂಗ್, ಪಾದಚಾರಿ ಮೇಲೆ ನಿಲುಗಡೆ, ಡ್ರಂಕ್ ಆ್ಯಂಡ್ ಡ್ರೈವ್, ಕರ್ಕಶ ಹಾರ್ನ್ ಆರೋಪದ ಮೇಲೆ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net