ದೆಹಲಿ ಪೊಲೀಸ್ ಸಂಸ್ಥೆಯಲ್ಲಿ ಉದ್ಯೋಗ ಪರ್ವ : ಪಿಯುಸಿ ಆದವರಿಗೆ 5846 ಕಾನ್​​ಸ್ಟೆಬಲ್ ಹುದ್ದೆಗಳು

Delhi police
Published on

ನವದೆಹಲಿ: ದೆಹಲಿ ಪೊಲೀಸ್​ ಸಂಸ್ಥೆಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್​ಎಸ್​​ಸಿ) ಕಾನ್​ಸ್ಟೆಬಲ್ (ಎಕ್ಸಿಕ್ಯೂಟಿವ್) ಹುದ್ದೆ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದೆ.

ಒಟ್ಟು 5846 (ಸಾಮಾನ್ಯ-2801, ಇಡಬ್ಲುಎಸ್- 583, ಒಬಿಸಿ-1133, ಎಸ್​ಸಿ-1037, ಎಸ್​ಟಿ- 302 ) ಹುದ್ದೆಗಳಿವೆ.

ಅರ್ಜಿ ಸಲ್ಲಿಸಲಿಚ್ಛಿಸುವವರು 10+2 (ಪಿಯುಸಿ) ಶಿಕ್ಷಣ ಪೂರೈಸಿರಬೇಕು. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಟ 25 ವರ್ಷ ಪೂರೈಸಿರಬೇಕು. ಅರ್ಹರಿಗೆ ಸೂಕ್ತ ಸಡಿಲಿಕೆ ಇದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿರುತ್ತದೆ. Physical Endurance and Measurement Test (PE&MT) ಇವು ಅರ್ಹತಾ ಪರೀಕ್ಷೆಯಾಗಿದ್ದು, ದೆಹಲಿಯಲ್ಲಿ ಮಾತ್ರ ನಡೆಯುತ್ತವೆ. ವೇತನಶ್ರೇಣಿ 21,700/-ರಿಂದ 69,100/- ರೂ. ಇರುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://ssc.nic.in ಮೂಲಕ ಸೆಪ್ಟೆಂಬರ್ 7 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅದೇ ವೆಬ್​ಸೈಟ್ ಅಥವಾ https://bit.ly/2Pd3uPB ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net