

ನವದೆಹಲಿ: ( Surgery ) ಇಲ್ಲೊಬ್ಬ ಬಾಲಕನಿಗೆ ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ತಿನ್ನುವ ಅಭ್ಯಾಸ. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳು ಆತನ ಹೊಟ್ಟೆ ಸೇರಿವೆ. ಆದರೆ ಅಪಾಯದಲ್ಲಿದ್ದ ಬಾಲಕನ ಜೀವ ಉಳಿಸುವ ವೇಳೆ ಆತ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬಾಲಕ ಆದಿತ್ಯ(15 ) ಮೃತ. 9ನೇ ತರಗತಿಯಲ್ಲಿ ಓದುತ್ತಿದ್ದನು. ಸರಿಯಾಗಿ ಆಹಾರ ತಿನ್ನುವ ಕಾಲದಲ್ಲಿ ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ತಿನ್ನುತ್ತಿದ್ದನು. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳನ್ನು ತಿಂದಿದ್ದಾನೆ.
ಹೀಗೆ ಹೊಟ್ಟೆ ಸೇರಿದ ಬಳಿಕ ಬಾಲಕನಿಗೆ ಹೊಟ್ಟೆ ನೋವು, ಉಸಿರಾಟದ ಸಮಸ್ಯೆ ಕಾಡಲಾರಂಭಿಸಿದೆ. ಬಳಿಕ ಜೀವಕ್ಕೆ ಅಪಾಯ ಎದುರಾಗಿದೆ. ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ತಿಂದ ಬಾಲಕ ಸಫ್ದರ್ಜಂಗ್ ಆಸ್ಪತ್ರೆ ಸೇರಿದ್ದಾನೆ.
ವೈದ್ಯರು ಆತನ ಜೀವ ಉಳಿಸಲು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಕೊನೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯೂ ಆಗಿದೆ. ಆದರೆ ಮಾರನೇ ದಿನ ಬಾಲಕ ಸಾವನ್ನಪ್ಪಿದ್ದಾನೆ.