ನಟಿ ಜ್ಯೋತಿಕಾ ಮಗಳನ್ನು ನೋಡಿದ್ದೀರಾ? ಎಷ್ಟು ಮುದ್ದಾಗಿದ್ದಾಳೆ ನೋಡಿ..ಅಮ್ಮನನ್ನೇ ಮೀರಿಸುವ ಸುಂದ್ರಿ..Jyothika Daughter

surya
Published on
Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ಮಗಳು ಅಮ್ಮನನ್ನೆ ಮೀರಿಸುವ ಸುಂದರಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ನಾಯಕ ಸೂರ್ಯ ಮತ್ತು ನಟಿ ಜ್ಯೋತಿಕಾ ಪ್ರೀತಿಸಿ ಮದುವೆಯಾದರು. ಈ ಜೋಡಿ ಕಾಲಿವುಡ್‌ನ ಮೋಸ್ಟ್  ಕ್ಯೂಟ್​​ ಜೋಡಿ ಎಂದು ಕರೆಯಲ್ಪಡುತ್ತದೆ. ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳು ಮತ್ತು ಮಗನ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳ ಹೆಸರು ದಿಯಾ ಮತ್ತು ಅವರ ಮಗ ವೆರು ದೇವ್. ಇತ್ತೀಚೆಗೆ ದಿಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದೀಪಾವಳಿ ಸಂದರ್ಭದಲ್ಲಿ ಸೂರ್ಯ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯ ಅವರ ಮಗಳು ದಿಯಾ ಈ ಫೋಟೋಗಳ ಹೈಲೈಟ್. ಅಮ್ಮನನ್ನು ಮೀರಿದ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ ದಿಯಾ.

ಈ ಪುಟಾಣಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೂರ್ಯ ಮತ್ತು ಜ್ಯೋತಿಕಾ ಅವರ ಅಭಿಮಾನಿಗಳು ಕೂಡ ದಿಯಾ ನಾಯಕಿಯಾಗಿ ಪ್ರವೇಶಿಸಬೇಕೆಂದು ಬಯಸುತ್ತಾರೆ. ಮತ್ತು ಈ ಪುಟಾಣಿ ಸಿನಿಮಾಗೆ ಎಂಟ್ರಿ ಕೊಡುತ್ತಾರೇಯೆ ಎಂದು ಕಾದು ನೋಡೋಣ....

ಸೂರ್ಯ ಬಾಲಿವುಡ್ ಕಡೆಗೆ ಒಲವು ತೋರುತ್ತಿದ್ದರೂ ತಮಿಳು ಚಿತ್ರಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರ ಮುಂಬರುವ ಚಿತ್ರ ಕಂಗುವ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಸಿರುಟ್ಟೈ ಶಿವ ನಿರ್ದೇಶನದ ಈ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಸೂರ್ಯ ಜೊತೆಗೆ ದಿಶಾ ಪಠಾನಿ ಮತ್ತು ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆಗಳಾದ ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ ​​ನಿರ್ಮಿಸಿವೆ.

ಕಂಗುವ 10 ಕ್ಕೂ ಹೆಚ್ಚು ಭಾಷೆಗಳಲ್ಲಿ ಮತ್ತು 3500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನವೆಂಬರ್ 14 ರಂದು ಮುಂಜಾನೆ 4 ಗಂಟೆಗೆ ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net