ಸದಸ್ಯರಿಗೆ 52 ಲಕ್ಷ ರೂ. ಸಾಲ ವಿತರಣೆ

ಸದಸ್ಯರಿಗೆ 52 ಲಕ್ಷ ರೂ. ಸಾಲ ವಿತರಣೆ
Published on

ಸರಗೂರು: ಸರಗೂರು ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ 23-24 ನೇ ಸಾಲಿನಲ್ಲಿ 351 ಸದಸ್ಯರಿಗೆ 52,30,000 ರೂ. ಸಾಲ ವಿತರಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ನಾಗರಾಜರಾಮ ತಿಳಿಸಿದರು.

ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ಸೋಮವಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘದಲ್ಲಿ ಸರಗೂರು ಮಾತ್ರವಲ್ಲದೆ ಕೊತ್ತೇಗಾಲ, ಮೂಡಲಮಠ, ಗೊಂತಗಾಲಹುಂಡಿ, ಹಳೆಹೆಗ್ಗುಡಿಲು, ಹಳಿಯೂರು ಗ್ರಾಮಗಳ 1980 ಜನರು ಸದಸ್ಯತ್ವ ಪಡೆದಿದ್ದು, ಶೇ.80 ರಷ್ಟು ಸಾಲ ವಸೂಲಾತಿಯಾಗಿದೆ ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮಹಾದೇವ ಮಾತನಾಡಿ, ನಮ್ಮ ಸಹಕಾರ ಸಂಘಕ್ಕೆ 2023-2024 ನೇ ಸಾಲಿನಲ್ಲಿ 2,92,582 ರೂ. ಆದಾಯ ಬಂದಿದೆ ಎಂದು ವಿವರಿಸಿದರು.

ಉಪಾಧ್ಯಕ್ಷ ಪಿ.ನೇಮಿಚಂದ್ರ, ನಿರ್ದೇಶಕ ಅಬ್ದುಲ್ ಜಲೀಲ್, ಎಚ್.ಸಿ. ರಾಮಲಿಂಗಪ್ಪ, ಶಿವಶಂಕರ್, ಎಸ್.ಬಿ. ಪ್ರೇಮಕುಮಾರಿ, ಎಚ್.ಎಂ. ಮಹದೇವನಾಯಕ, ಎಸ್.ಆರ್. ಸೋಮಶೇಖರ್, ಎಚ್.ಜೆ. ಚನ್ನನಾಯಕ, ಕೂಸಮ್ಮ, ಜಿ.ನಾಗರಾಜು, ಮುಖಂಡ ಮಹದೇವ, ದೇವಣ್ಣ, ಸತೀಶ್, ರಮೇಶ್, ಪುಟ್ಟ ಹನುಮಯ್ಯ, ಸಿಮೆಂಟ್ ಮಹೇಶ್, ಶ್ರೀಕಂಠಸ್ವಾಮಿ, ಲಿಂಗಚಾರ್, ಮಲ್ಲೇಶ್, ಮಹದೇವನಾಯಕ, ಶಿವಪ್ಪ, ಗೋಪಾಲಯ್ಯ, ನೇಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net