ಏ.15ರಂದು ದೆಹಲಿಯಲ್ಲಿ ಸಪ್ತಕ ಟ್ರಸ್ಟ್​ನ 500ನೇ ಕಾರ್ಯಕ್ರಮ

Sapthaka
Published on

ಬೆಂಗಳೂರು: ಸಪ್ತಕ ಚಾರಿಟೇಬಲ್ ಟ್ರಸ್ಟ್​ ಬೆಂಗಳೂರು ಇದರ 500ನೇ ಕಲಾ ಕಾರ್ಯಕ್ರಮ ಏ.15ರಂದು ಸಂಜೆ 5 ಗಂಟೆಗೆ ದೆಹಲಿ ಕರ್ನಾಟಕ ಸಂಘದ ಸಭಾ ಭವನದಲ್ಲಿ ನಡೆಯಲಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಕಾನೂನು ವಿಭಾಗದ ಮುಖ್ಯಸ್ಥ ಡಾ. ವೆಂಕಟಾಚಲ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪಂ. ಜಯತೀರ್ಥ ಮೇವುಂಡಿ(ಗಾಯನ), ದುರ್ಜಯ್ ಭೌಮಿಕ್(ತಬಲಾ) ಹಾಗೂ ಪರೋಮಿತಾ ಮುಖರ್ಜಿ(ಹಾರ್ಮೋನಿಯಂ) ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಪ್ತಕ ಟ್ರಸ್ಟ್​ನ ಸಂಚಾಲಕ ಜಿ.ಎಸ್ ಹೆಗಡೆ ತಿಳಿಸಿದ್ದಾರೆ.

2006ರಲ್ಲಿ ಸ್ಥಾಪನೆಯಾದ ಸಪ್ತಕ ದತ್ತಿ ಸಂಸ್ಥೆ ರಾಜ್ಯದ ವಿವಿಧೆಡೆ ಸೇರಿದಂತೆ ಹೊರರಾಜ್ಯಗಳಲ್ಲಿ ಸಂಗೀತ, ಯಕ್ಷಗಾನ, ತಾಳಮದ್ದಳೆ ಸಹಿತ 499 ಕಾರ್ಯಕ್ರಮ ಏರ್ಪಡಿಸಿಡಿಸಿ ಯಶಸ್ವಿಯಾಗಿದೆ. ಇದೀಗ 500ನೇ ಕಾರ್ಯಕ್ರಮವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net