ಮೊಮ್ಮಗನನ್ನೇ ಮದುವೆಯಾದ 50 ವರ್ಷದ ಮಹಿಳೆ! ವಿಷಯ ತಿಳಿದ ಆಕೆಯ ಪತಿ ಮಾಡಿದ್ದೇನು? Woman Marries Grandson

Woman Marries Grandson
Published on

Woman Marries Grandson: 50 ವರ್ಷದ ಮಹಿಳೆಯೊಬ್ಬರು ತನ್ನ ಮೊಮ್ಮಗನೊಂದಿಗೆ ಓಡಿಹೋಗಿ ದೇವಸ್ಥಾನದಲ್ಲಿ ವಿವಾಹವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿರುವ ಇಂದ್ರಾವತಿ (50) ಎಂಬ ಮಹಿಳೆ ತನ್ನ 30 ವರ್ಷದ ಮೊಮ್ಮಗ ಆಜಾದ್​​​ನ್ನು ಮದುವೆಯಾಗಲು ತನ್ನ ಇಡೀ ಕುಟುಂಬವನ್ನು ತ್ಯಜಿಸಿ, ದೇವಸ್ಥಾನಕ್ಕೆ ಹೋಗಿ ವಿವಾಹವಾಗಿದ್ದಾರೆ.

ಅವರಿಬ್ಬರು ಓಡಿಹೋಗುವ ನಾಲ್ಕು ದಿನಗಳ ಮೊದಲು, ಇಂದ್ರಾವತಿಯ ಪತಿ ಚಂದ್ರಶೇಖರ್ ಅವರು ರಹಸ್ಯವಾಗಿ ಮಾತನಾಡುತ್ತಿರುವುದನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದರು. ಅವರ ಸಂಬಂಧದ ಬಗ್ಗೆ ತಿಳಿದಾಗ, ಆಕೆತ ಪತಿ ಅದನ್ನು ವಿರೋಧಿಸಿ, ಅವರಿಬ್ಬರಿಗೂ ಬೇರೆಯಾಗುವಂತೆ ಎಚ್ಚರಿಸಿದ್ದನು.ಆದರೆ ಮಹಿಳೆ ಮತ್ತು ಅದನ್ನು ಒಪ್ಪದೆ ನಿರಾಕರಿಸಿ ಓಡಿಹೋಗಿ ಮದುವೆಯಾಗಿದ್ದಾರೆ.

ಅಷ್ಟೇ ಅಲ್ಲದೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಇಂದ್ರಾವತಿ ತನ್ನ ಪತಿ ಮತ್ತು ಮಕ್ಕಳಿಗೆ ವಿಷ ಹಾಕಲು ಸಹ ಪ್ರಯತ್ನಿಸಿದ್ದಳು. ಇಂದ್ರಾವತಿಯ ಪತಿಯಾದ ಚಂದ್ರಶೇಖರ್ ಕೆಲಸಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ದೂರ ಹೋಗುತ್ತಿದ್ದರಿಂದ ತನ್ನ ಪತ್ನಿ ಹಾಗೂ ಮೊಮ್ಮಗನ ನಡುವೆ ಸಂಬಂಧ ಬೆಳೆಯಲು ಅವಕಾಶ ಮಾಡಿಕೊಟ್ಟಿತು ಎಂದು ಭಹಿರಂಗ ಪಡೆಸಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net