ಮನೆಯಲ್ಲಿ ಪದೇಪದೆ ಈ 5 ಚಿಹ್ನೆಗಳು ಗೋಚರಿಸಿದ್ರೆ ಎಚ್ಚರ; ಲಕ್ಷ್ಮೀದೇವಿ ಕೃಪಾಕಟಾಕ್ಷ ಕಳೆದುಕೊಂಡಂತೆ! | God Lakshmi

dk - 2025-04-08T111204.360
Published on

God Lakshmi : ಲಕ್ಷ್ಮೀದೇವಿ ಕೃಪಾಕಟಾಕ್ಷ ಅಥವಾ ಅಶಿರ್ವಾದ ಇರುವವರೆಗೂ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಅವನ/ಆಕೆಯ ಎಲ್ಲಾ ಕೆಲಸಗಳು ಸುಲಭವಾಗಿ ಮುಗಿಯುತ್ತವೆ. ಆದರೆ, ಕೆಲ ಬಾರಿ ಏಕಾಏಕಿ ದುಡ್ಡಿನ ಕೊತರೆ ಉಂಟಾಗಿ ಅನೇಕ ಸಮಸ್ಯೆಗಳು ಎದುರಿಸಬಹುದು.ಅಲ್ಲದೆ, ಮನೆಯ ಕುಟುಂಬದಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಮುಗಿದ ಕೆಲಸ ಕೂಡ ಹಾಳಾಗಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣ ಲಕ್ಷ್ಮಿ ದೇವಿಯು ಕೋಪಗೊಂಡಿರಬಹುದು. ಲಕ್ಷ್ಮಿ ದೇವಿಯು ಕೋಪಗೊಂಡಾಗ, ಕೆಲವು ವಿಶೇಷ ಚಿಹ್ನೆಗಳು ಕಂಡುಬರುತ್ತವೆ.

ಇದನ್ನು ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯೊಂದಿಗೆ ಸಂಬಂಧ ಹೊಂದಿರುವ ನಕಾರಾತ್ಮಕ ಶಕ್ತಿಯ ಅನೇಕ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಲಕ್ಷ್ಮಿ ದೇವಿಯು ಕೋಪಗೊಂಡರೆ ಯಾವ ಚಿಹ್ನೆಗಳು ಕಂಡುಬರುತ್ತವೆ ಎಂಬುದು ನೋಡೋಣ..

ಲಕ್ಷ್ಮಿ ದೇವಿಯು ಕೋಪಗೊಂಡರೆ ಗೋಚರಿಸುವ ಚಿಹ್ನೆಗಳು

1.ತುಳಸಿಗಿಡ ಒಣಗುವುದು

ಸಾಮಾನ್ಯವಾಗಿ ಭಾರಿತೀಯ ಎಲ್ಲಾ ಮನಗಳಲ್ಲಿ ತುಳಸಿಗಿವನ್ನು ಮಂಗಳಕವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀದೇವಿ ಕೃಪಕಟಾಕ್ಷ ಕಳೆದುಕೊಳ್ಳುವ ಲಕ್ಷಣಗಳಲ್ಲಿ ಮೊದಲನೇಯದಾಗಿ ತುಳಸಿಗಿಡ ಒಣಗಲು ಪ್ರಾರಂಭಿಸುತ್ತದೆ. ಜನರು ಅದನ್ನು ಲಕ್ಷ್ಮೀದೇವಿ ಅಸಮಾಧಾನ ಎಂದು ನಂಬುತ್ತಾರೆ. ಹೀಗಾಗಿ, ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ. ತುಳಸಿ ನೆಟ್ಟಿರುವ ಕುಂಡದ ಸುತ್ತಲೂ ಪವಿತ್ರ ದಾರವನ್ನು ಕಟ್ಟಿ ಮತ್ತು ಪ್ರತಿದಿನ ಸಂಜೆ ತುಳಸಿಯ ಬಳಿ ದೀಪವನ್ನು ಬೆಳಗಿಸಿ.

2.ಟ್ಯಾಪ್​ನಿಂದ ನಿರಂತರ ನೀರು ಸೋರುತ್ತಿರುವುದು

ವಾಸ್ತು ಶಾಸ್ತ್ರದಲ್ಲಿ, ನಲ್ಲಿಯಿಂದ ನೀರು ತೊಟ್ಟಿಕ್ಕುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಆರ್ಥಿಕ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅಂದರೆ ಇದು ಹಣದ ನಷ್ಟಕ್ಕೆ ಕಾರಣವಾಗಬಹುದು. ನಲ್ಲಿಯಿಂದ ನೀರು ತೊಟ್ಟಿಕ್ಕುವುದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ ಎಂದು ಜನರು ನಂಬುತ್ತಾರೆ, ಆದ್ದರಿಂದ ನಿಮ್ಮ ಮನೆಯಲ್ಲಿ ನಲ್ಲಿಯಿಂದ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿದ್ದರೆ, ನೀವು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಬೇಕು.

3.ಅಗ್ಗಾಗೆ ಹಣ ಮತ್ತು ಆಭರಣ ನಷ್ಟ

ತಾಯಿ ಲಕ್ಷ್ಮೀ ಸಂಪತ್ತಿನ ದೇವತೆ.ಆದ್ದರಿಂದ ನೀವು ಪದೇಪದೆ ಹಣ ಮತ್ತು ಆಭರಣ ಕಳೆದುಕೊಳ್ಳಲು ಪ್ರಾರಂಭಿಸಿದ್ರೆ, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಇರಲು ಬಯಸುವುದಿಲ್ಲ. ಇದರಿಂದ ಹೊರ ಬರಬೇಕಾದ್ರೆ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ಕೇಸರಿ ಖೀರ್ ಅರ್ಪಿಸಿ ಮತ್ತು ಬಡವರಿಗೆ ಹಂಚಿ.

4.ಪದೇಪದೆ ನಷ್ಟದ ಕನಸು ಬೀಳುವುದು

ನೀವು ಪದೇಪದೆ ಹಣ ನಷ್ಟದ ಕನಸುಗಳನ್ನು ಕಂಡರೆ ಅಥವಾ ನಿಮ್ಮ ಕನಸಿನಲ್ಲಿ ನೀವು ಯಾವುದಾದರೂ ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ, ಯಾವುದೋ ಕಾರಣಕ್ಕಾಗಿ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಂಡಿದ್ದಾಳೆಂದು ನೀವು ಅರ್ಥಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು.

5. ಬೆಳ್ಳಿನಾಣ್ಯ ಕಳೆದರೆ

ಬೆಳ್ಳಿ ನಾಣ್ಯ ಕಳೆದುಹೋದರೆ, ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಂಡಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.ಲಕ್ಷ್ಮೀದೇವಿಯನ್ನು ಪೂಜಿಸಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net