'ನನಗೆ 5 ಸಿನಿಮಾ ಕಷ್ಟವೇ ಅಲ್ಲ'! 'ಕಬ್ಜ 2' ನಿರ್ದೇಶಕ ತಿಳಿಸಿದ್ದಿಷ್ಟು

ವಿಜಯವಾಣಿ - 2024-01-25T190102.162
Published on

ಬೆಂಗಳೂರು: ಆರ್​ಸಿ ಪ್ರೊಡಕ್ಷನ್ಸ್​ ಸಂಸ್ಥಾಪಕ, 'ಕಬ್ಜ' ನಿರ್ದೇಶಕರಾದ ಆರ್. ಚಂದ್ರು ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದು, ಸಾಲು ಸಾಲು ಬಹುನಿರೀಕ್ಷಿತ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಈ ಒಂದು ಚಿತ್ರಗಳ ಮೂಲಕ ಸದ್ಯ ಪ್ಯಾನ್ ಇಂಡಿಯಾ ಮಟ್ಟವನ್ನು ಮತ್ತಷ್ಟು ಬಲಿಷ್ಠಗೊಳಿಸಿರುವ ನಿರ್ದೇಶಕರು, 'ಕಬ್ಜ 2' ಸೇರಿದಂತೆ ಇತರೆ ಸಿನಿಮಾಗಳ ಕುರಿತು ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಆರ್​ಸಿ ಪ್ರೊಡಕ್ಷನ್ ಬಗ್ಗೆ ಮಾತನಾಡುವಾಗ ಭಾವುಕರಾದ ಚಂದ್ರು, "ನನಗೆ ಸ್ಪೂರ್ತಿ ಎಂದರೆ ಅದು ಉಪ್ಪಿ ಸರ್​. ಒಂದು ಸಿನಿಮಾ ಮಾಡೋದೇ ಕಷ್ಟ! ಆದ್ರೆ, ಅವರಿಗೆ ಅವರೇ ನಿರ್ದೇಶನ ಮಾಡಿಕೊಂಡು, ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ನಿಂತಿದ್ದಾರೆ. ಉಪ್ಪಿ ಸರ್​ ನನ್ನ ಜತೆ ಇದೀನಿ ಅಂತ ಹೇಳಿ, ನನಗೆ ಮೂರು ಚಿತ್ರಗಳನ್ನು ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದರು.

"ನನ್ನ ಜೀವನದಲ್ಲಿ ಇದೊಂದು ಮಹತ್ತರ ಘಟ್ಟ. ನಾನು ಒಬ್ಬಂಟಿಯಾಗಿ ಇಲ್ಲಿಯವರೆಗೆ 12 ಸಿನಿಮಾಗಳನ್ನು ಮಾಡಿದ್ದೇನೆ. ಈಗ ನನಗೆ ಒಂದು ದೊಡ್ಡ ತಂಡ ಸಿಕ್ಕಿದೆ. ಅದಕ್ಕೆ ಐದು ಫಿಲಂ ಮಾಡ್ತಿದ್ದೇನೆ. ಐದು ನನಗೆ ಕಷ್ಟವೇ ಅಲ್ಲ. ನಿಮ್ಮ ಆಶೀರ್ವಾದ ಇದ್ದರೆ 50 ಚಿತ್ರಗಳನ್ನು ಮಾಡ್ತೀನಿ. ಯಾಕಂದ್ರೆ, ನನ್ನ ತಂಡ ಆ ರೀತಿ ಇದೆ. ಆತರ ನಾನು ಉಳಿಸಿಕೊಂಡಿದ್ದೀನಿ" ಎಂದು ಭಾವುಕರಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net