

ಬೆಂಗಳೂರು: ರಾಜಧಾನಿಯಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಲು ಪೊಲೀಸ್ ಇಲಾಖೆ ಜಿಯೋ ಟ್ಯಾಗಿಂಗ್ ಒಳಗೊಂಡ 5.35 ಲಕ್ಷ ಸಿಸಿ ಕ್ಯಾಮರಾ ಅಳವಡಿಸಿದೆ.
ಮೊಬೈಲ್ ಕಾಂಪೇನಿಯಿನ್ ಾರ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ (ಎಂಸಿಸಿಟಿಎನ್‌ಎಸ್) ಯೋಜನೆಯಡಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಜಿಯೋ ಟ್ಯಾಗಿಂಗ್ ಕಾರ್ಯ ನಿರ್ವಹಿಸಲಿವೆ. ಎಂಸಿಸಿಟಿಎನ್‌ಎಸ್ ಡೆವಲಪ್‌ಮೆಂಟ್ ಡಾಟಾ ಪ್ರಕಾರ ಏಪ್ರಿಲ್ 30ರ ವರೆಗೆ ನಗರದಲ್ಲಿ 5,35,815 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
2024ರ ಜನವರಿ 1ರ ವೇಳೆಗೆ 2,32,711 ಕ್ಯಾಮರಾ ಅಳವಡಿಸಲಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ 3 ಲಕ್ಷಕ್ಕೂ ಅಧಿಕ ಹೊಸ ಕ್ಯಾಮರಾಗಳನ್ನು ಜಿಯೋ ಟ್ಯಾಗ್ ಮಾಡಿರುವುದು ದಾಖಲೆ ಆಗಿದೆ. ವಸತಿ ಪ್ರದೇಶ, ವ್ಯಾಪಾರಿಕ ಕೇಂದ್ರ, ಮುಖ್ಯ ರಸ್ತೆ, ಸಿಗ್ನಲ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಲಾಗಿದೆ.
ಡಿಜಿಟಲ್ ಜಿಯೋ ಟ್ಯಾಗಿಂಗ್ ಡಾಟಾ ಪೊಲೀಸ್ ಇಲಾಖೆಗೆ ನಿಖರ ಸ್ಥಳಾನುಸಾರ ಮಾಹಿತಿ ಸಿಗಲಿದೆ. ಆದರಿಂದ ಅಪರಾಧ ಪ್ರಕರಣಗಳ ತನಿಖೆ ಮತ್ತು ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ನೆರವಾಗುತ್ತಿದೆ.
ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತು ಎಂಸಿಸಿಟಿಎನ್‌ಎಸ್ ಅಭಿವೃದ್ಧಿಪಡಿದ ಈ ಕ್ಯಾಮರಾ ಭವಿಷ್ಯದಲ್ಲಿ ಸ್ಮಾರ್ಟ್ ಪೆಟ್ರೋಲಿಂಗ್, ಡಿಜಿಟಲ್ ನಗರ ಭದ್ರತಾ ವ್ಯವಸ್ಥೆ ಮತ್ತು ವಿಶ್ಲೇಷಣಾ ತನಿಖೆ ಯೋಜನೆಗಳಿಗೆ ಭದ್ರ ಅಡಿಪಾಯ ಆಗಲಿದೆ. ಭವಿಷ್ಯದಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ತಂತ್ರಜ್ಞಾನ ಅಳವಡಿಸಿಕೊಂಡು ಜನರ ಸೇವೆಗೆ ಸಜ್ಜಾಗಲಿದೆ ಎಂದು ಬಿ.ದಯಾನಂದ್ ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವಜನಿಕ ವಲಯವೂ ಸಾಥ್ :
2024ರ ಜನವರಿಲ್ಲಿ ಭರವಸೆ ನೀಡಿದಂತೆ 2025ರ ಅಂತ್ಯಕ್ಕೆ 5 ಲಕ್ಷ ಸಿಸಿ ಕ್ಯಾಮರಾ ಅಳವಡಿಕೆ ಪೂರ್ಣ ಆಗಬೇಕಾಗಿತ್ತು. ಆದರೆ, 4 ತಿಂಗಳ ಬಳಿಕ ಗುರಿಯನ್ನು ತಲುಪಲಾಗಿದೆ. ಈ ಕ್ಯಾಮರಾ ಅಳವಡಿಕೆಯಿಂದ ಸಾರ್ವಜನಿಕ ವಲಯದಲ್ಲಿ ಅನುಕೂಲವಾಗಲಿದೆ. ಘಟನೆ ನಡೆದಾಗ ವಾಸ್ತವತೆ ಮತ್ತು ಸತ್ಯಾಅಸತ್ಯತೆ ತಿಳಿಯಲು ಸಹಕರಿಯಾಗಲಿದೆ.
ಪಬ್ಲಿಕ್ ಸೇಫ್ಟಿ ಕಾಯ್ದೆ ಅನುಷ್ಠಾನ ಮಾಡಿದಾಗ ಬೇರೆಬೇರೆ ವಲಯದಲ್ಲಿ ಕ್ಯಾಮರಾ ಅಳವಡಿಸಿದ್ದು, ಸ್ೇ ಸಿಟಿ ಯೋಜನೆಯಡಿ,ಬಿಬಿಎಂಪಿ ಸ್ಥಳೀಯ ಸಂಸ್ಥೆಗಳು ಮತ್ತು ಸ್ವಂತ ಮನೆ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಬೇಕರಿ, ಟೀ ಶಾಪ್ ಸೇರಿ ಸಣ್ಣ ಅಂಗಡಿಗಳಲ್ಲಿ ಕ್ಯಾಮರಾ ಅಳವಡಿಸಲಾಗಿದೆ.
ಪೋರ್ಟಾಲ್‌ಗೆ ಲಿಂಕ್ :
5.34 ಲಕ್ಷ ಕ್ಯಾಮರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ಎಂಸಿಸಿಟಿಎನ್‌ಎಸ್ ಪೋರ್ಟಾಲ್‌ಗೆ ಲಿಂಕ್ ಮಾಡಲಾಗಿದೆ. ಕಮಿಷನರೇಟ್‌ನಲ್ಲಿ ಎಲ್ಲಿಯೇ ಅಹಿತರ ಘಟನೆ, ಅಪಘಾತ, ರಸ್ತೆ ಅಪಘಾತ ಸೇರಿದಂತೆ ಯಾವುದೇ ಘಟನೆ ನಡೆದಾಗ ತಕ್ಷಣ ಆ ಸ್ಥಳದಲ್ಲಿ ಎಷ್ಟು ಕ್ಯಾಮರಾ ಇವೆ ಎಂದು ಮಾಹಿತಿ ಪಡೆದು ಸಂಬಂಧಪಟ್ಟವರನ್ನು ಸಂಪರ್ಕ ಮಾಡಲು ಅನುಕೂಲವಾಗಲಿದೆ. ಇದರಲ್ಲಿ ಸೆರೆ ಆಗಿರುವ ದೃಶ್ಯಾವಳಿ ಆಧಾರದ ಮೇಲೆ ಘಟನೆಯ ಸತ್ಯ ಅಸತ್ಯತೆಯನ್ನು ನಿರ್ಧರ ಮಾಡಲು ತನಿಖಾಧಿಕಾರಿಗೆ ಬಹಳ ಅನುಕೂಲವಾಗಲಿದೆ.
ವಿಭಾಗವಾರು ಸಿಸಿ ಕ್ಯಾಮರಾ ವಿವರ
-------------------------
ವಿಭಾಗ ಕ್ಯಾಮರಾ
--------------------------
ಕೇಂದ್ರ 18,269
ಪಶ್ಚಿಮ 1,05,723
ಉತ್ತರ 67,457
ದಕ್ಷಿಣ 59,804
ಪೂರ್ವ 55,355
ಈಶಾನ್ಯ 51,228
ಆಗ್ನೇಯಾ 77,786
ವೈಟ್‌ಫೀಲ್ಡ್ 1,00,193
----------------------
ಒಟ್ಟು 5,35,815