ಮಿದುಳು ತಿನ್ನುವ ಅಮೀಬಾ: ಈ ವಿಚಿತ್ರ ಖಾಯಿಲೆಗೆ 3 ಸಾವು, ಮತ್ತೊಂದು ಪ್ರಕರಣ ಪತ್ತೆ!

ವಿಜಯವಾಣಿ-2024-07-06T132021.342-4
Published on

ಕೇರಳ: ಕಳೆದ ಮೂರು ತಿಂಗಳ ಹಿಂದಿನಿಂದ ರಾಜ್ಯದಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ಹಾಗೂ ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕು ಇಲ್ಲಿಯವರೆಗೆ ಓರ್ವ ಬಾಲಕ ಸೇರಿ ಮೂವರನ್ನು ಬಲಿ ಪಡೆದಿತ್ತು. ಆದರೆ, ಈ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ಈ ಅಪರೂಪದ ಸೋಂಕಿನಿಂದಾಗಿ ಕಳೆದ ಮೂರು ತಿಂಗಳಲ್ಲಿ ಮೂರು ಸಾವು ವರದಿಯಾಗಿದೆ. ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅನ್ನು ಮಿದುಳು ತಿನ್ನುವ ಅಮೀಬಾ ಎಂದೂ ಕರೆಯಲಾಗುತ್ತದೆ. ಕಲುಷಿತ ನೀರಿನಿಂದ ಈ ಸೋಂಕು ಹಬ್ಬುತ್ತದೆ. ಕಳೆದ ತಿಂಗಳು ಕಣ್ಣೂರಿನಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿದ್ದಳು. ಮಲ್ಲಪ್ಪುರಂನಲ್ಲಿ 5 ವರ್ಷದ ಮಗು ಮೇ ತಿಂಗಳಲ್ಲಿ ಸಾವನ್ನಪ್ಪಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಜೀವ ಬಲಿಯಾಗಿರುವುದು ವರದಿಯಾಗಿದೆ.

ಕಲುಷಿತ ನೀರಿನಲ್ಲಿ ಕಂಡುಬರುವ ಅಪರೂಪದ ಮಿದುಳು ತಿನ್ನುವ ಅಮೀಬಾ ಸೋಂಕು ರಾಜ್ಯದ ಜನರನ್ನು ಭಯಭೀತರನ್ನಾಗಿ ಮಾಡಿದೆ. ವರದಿಗಳ ಪ್ರಕಾರ, ಈ ಸೋಂಕಿಗೆ ಮೃತಪಟ್ಟಿರುವುದು ಅಪ್ರಾಪ್ತ ವಯಸ್ಕರೇ ಎಂಬುದು ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇದೀಗ ಈ ಸೋಂಕಿನ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದು ನಾಲ್ಕನೇ ಕೇಸ್​ ಎಂದು ವರದಿ ಉಲ್ಲೇಖಿಸಿದೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಜನಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುವಂತೆ ಎಚ್ಚರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net