180 ಮಂದಿಗೆ 41 ಕೋಟಿ ರೂ. ವಂಚನೆ

cyber crime
Published on

ಬೆಂಗಳೂರು: ಹೈದರಾಬಾದ್ ಮೂಲದ ಕಂಪನಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 180 ಮಂದಿಯಿಂದ 41 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಮುನೇಕೊಳಲು ಗ್ರೀನ್ ಗಾರ್ಡನ್ ನಿವಾಸಿ ಓಂಬೀರ್ ಸಿಂಗ್, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಹೈದರಾಬಾದ್ ಮೂಲದ ಅಮರ್‌ದೀಪ್ ಸಿಂಗ್, ಯೋಗೇಂದ್ರ ಸಿಂಗ್, ಪವನ್ ಒಡೆಲಾ, ಅರ್ಯನ್ ಸಿಂಗ್ ಸೇರಿದಂತೆ 14 ಆರೋಪಿಗಳವಿರುದ್ಧ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ಮೂಲದ ಾಲ್ಕನ್ಸ್ ಗ್ರೂಪ್‌ನ ಕ್ಯಾಪಿಟಲ್ ಪ್ರೊಟೆಕ್ಷನ್ ೆರ್ಸ್ ಪ್ರೈ.ಲಿ. ಹೆಸರಿನಲ್ಲಿ ಆರೋಪಿತರು ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.2024ರ ಡಿಸೆಂಬರ್ 21ರಿಂದ ಜನವರಿ 6ರ ವರೆಗೂ ದೂರುದಾರ ಓಂಬೀರ್ ಸಿಂಗ್ ಹಂತ ಹಂತವಾಗಿ ಆರೋಪಿತ ಕಂಪನಿಯ ಬ್ಯಾಂಕ್ ಖಾತೆಗೆ 1.07 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಇದಲ್ಲದೆ, ಇದೇ ರೀತಿಯಾಗಿ 179 ಜನರು 40 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಕೊನೆಗೆ ಲಾಭಾಂಶ ಮತ್ತು ಹೂಡಿಕೆ ಹಣವನ್ನೂ ಕೊಡದೆ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಮೊಬೈಲ್ ನಂಬರ್‌ಗಳು ಸ್ವಿಚ್ ಆ್ ಆಗಿದ್ದು, ಮೊಸ ಮಾಡುವ ಉದ್ದೇಶಕ್ಕೆ ಆರೋಪಿಗಳು ಹಣ ಹೂಡಿಕೆ ಮಾಡಿಕೊಂಡಿರುವುದು ಮನವರಿ ಆಗಿದೆ. ಆದರಿಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಓಂಬೀರ್ ಸಿಂಗ್ ಉಲ್ಲೇಖಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಎ್ಐಆರ್ :

ಆರೋಪಿತ ಾಲ್ಕನ್ಸ್ ಗ್ರೂಪ್‌ನ ಕ್ಯಾಪಿಟಲ್ ಪ್ರೊಟೆಕ್ಷನ್ ೆರ್ಸ್ ಪ್ರೈ.ಲಿ. ವಿರುದ್ಧ 2ನೇ ಪ್ರಕರಣ ದಾಖಲಾಗಿದೆ. ಸಂಜಯನಗರದ ಎಸ್.ಪಿ. ರವಿಶಂಕರ್ ಎಂಬುವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಠಾಣೆ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2024ರ ಅಕ್ಟೋಬರ್ 28ರಿಂದ ಜನವರಿ 23ರ ನಡುವೆ ರವಿಶಂಕರ್, ಬ್ಯಾಂಕ್ ಖಾತೆಯಿಂದ, ಕ್ರೆಡಿಟ್ ಕಾರ್ಡ್ ಮೂಲಕ ಹಂತ ಹಂತವಾಗಿ ಆರೋಪಿತ ಕಂಪನಿ ಬ್ಯಾಂಕ್ ಖಾತೆಗೆ 39.60 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಹಣವನ್ನು ಲಪಟಾಯಿಸಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net