40 ಮಹಿಳೆಯರಿಗೆ ಒಬ್ಬನೇ ಪತಿ; ಜಾತಿಗಣತಿ ವೇಳೆ ಬಯಲಾಯ್ತು ಅಚ್ಚರಿ ಸಂಗತಿ

criminal marriage
Published on

ಪಟ್ನಾ: ಒಬ್ಬ ವ್ಯಕ್ತಿಗೆ ಅಂದಾಜು ಎಷ್ಟು ಜನ ಪತ್ನಿಯರಿರಬಹುದು ಒಂದು, ಎರಡು, ಹತ್ತು ಅಥವಾ ಹದಿನೈದು ಜನರನ್ನು ವಿವಾಹವಾಗಿರುವುದನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ.

ಬಿಹಾರದಲ್ಲಿ ಒಬ್ಬ ವ್ಯಕ್ತಿ 40 ಜನ ಹೆಂಡತಿಯರನ್ನು ಹೊಂದುವ ಮೂಲಕ ಸುದ್ದಿಯಲ್ಲಿದ್ದು ಈ ವಿಚಾರ ಜಾತಿ ಗಣತಿ ವೇಳೆ ಜಗಜ್ಜಾಹೀರಾಗಿದೆ.

ಯಾರು ಆ ವ್ಯಕ್ತಿ?

ಬಿಹಾರದ ಅಗರ್ವಾಲ್ ಜಿಲ್ಲೆಯ ರೆಡ್‍ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸುವ ವೇಳೆ 40 ಜನ ಮಹಿಳೆಯರು ಹೇಳಿದ ಹೆಸರು ಕೇಳಿ ಅಧಿಕಾರಿಗಳು ಒಮ್ಮೆಲೆಗೆ ಶಾಕ್​ ಆಗಿದ್ದಾರೆ.

Caste census

40 ಜನ ಮಹಿಳೆಯರು ತಮ್ಮ ಪತಿಯ ಹೆಸರನ್ನು ರೂಪ್​ಚಂದ್​ ಎಂದು ಹೇಳಿದ್ದಾರೆ. ಅವರ ಮಕ್ಕಳು ಸಹ ತಂದೆಯ ಹೆಸರಿನ ಜಾಗದಲ್ಲಿ ರೂಪ್​ಚಂದ್​ ಹೆಸರನ್ನು ಬರೆದಿರುವುದು ಅಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿದೆ.

ಯಾರು ಈ ರೂಪ್​ಚಂದ್​?

ಅಗರ್ವಾಲ್ ಜಿಲ್ಲೆಯ ವಾರ್ಡ್​ ನಂ 7ರ ರೆಡ್​ಲೈಟ್​ ಏರಿಯಾದಲ್ಲಿ ವಾಸಿಸುವ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಡುವುದು ಹಾಗೂ ನೃತ್ಯವನ್ನು ಮಾಡುತ್ತಾರೆ. ಆದರೆ, ಇವರ್‍ಯಾರಿಗೂ ಸ್ಥಿರ ವಿಳಾಸ ಇಲ್ಲದ ಕಾರಣ ಇಲ್ಲಿನ ಮಹಿಳೆಯರು ತಮ್ಮ ಪತಿಯ ಹೆಸರಿನ ಜಾಗದಲ್ಲಿ ರೂಪ್​ಚಂದ್​ ಎಂದು ಹೆಸರಿಸಿದ್ದಾರೆ.

ಇದೀಗ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಯಾರು ಈ ರೂಪಚಂದ್​ ಎಂದು ತಲೆಕೆಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net