

ಬೆಂಗಳೂರು: ಋಆಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಈ ಫೋಟೋಗೆ ಟೀಂ ಗ್ರೀನ್ ಎಂದು ಅಡಿಬರಹ ನೀಡಿದ್ದು ಇದಕ್ಕೆ ಫಾಪ್ ಡು ಪ್ಲೆಸಿಸ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಫಾಪ್ ಡು ಪ್ಲೆಸಿಸ್ ಕಮೆಂಟ್ಗೆ ರಿಪ್ಲೈ ಮಾಡಿದ ಅನುಷ್ಕಾ ಶರ್ಮಾ ಫೋಟೋಗೆ ಫ್ರೆಶ್ ಲೈಮ್ ಸೋಡಾ ಎಂಬ ಅಡಿ ಬರಹವನ್ನು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಈ ಪೋಟೋ ಹೆಚ್ಚು ಸದ್ದು ಮಾಡುತ್ತಿದೆ.
ಈ ಪೋಟೋವನ್ನು ಆರ್ಸಿಬಿ ಫ್ರಾಂಚೈಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಬೇರೆ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ.
ಅನುಷ್ಕಾ ಹಾಗೂ ಫಾಪ್ ಡು ಪ್ಲೆಸಿಸ್ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ತಮಾಷೆ ಮಾಡುತ್ತಿದ್ದ ಸಮಯದಲ್ಲಿ ನೆಟ್ಟಿಗರು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇರುವುದನ್ನು ಗಮನಿಸಿದ್ದಾರೆ.
ಅದು ಹೇಗೆ ಎಂದರೆ ಈ ಮೂವರು ತೆಗೆದಿರುವ ಫೋಟೋ ಫ್ರೇಮ್ನಲ್ಲಿ ದ್ರಾವಿಡ್ ಕುಳಿತು ಚರ್ಚಿಸುತ್ತಿರುವುದು ಕಂಡು ಬರುತ್ತದೆ. ಇನ್ನು ಈ ಪೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ.