12ನೇ ಮಹಡಿಯಿಂದ ಬಿದ್ದು 4 ವರ್ಷದ ಬಾಲಕಿ ಸಾವು; ಮನಕಲಕುವಂತಿದೆ ಸಿಸಿಟಿವಿ ದೃಶ್ಯ| girl-dead

Untitled design (1)
Published on

ಮುಂಬೈ; 4 ವರ್ಷದ ಅನ್ವಿಕಾ ಪ್ರಜಾಪತಿ ಎಂಬ ಬಾಲಕಿ ವಸತಿ ಕಟ್ಟಡದ 12 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬೈನ ನೈಗಾಂವ್‌ನಲ್ಲಿರುವ ನವಕರ್ ನಗರದಲ್ಲಿ ನಡೆದಿದೆ.

ಪುಟ್ಟ ಬಾಲಕಿಯನ್ನು ಶೂ ಕಪಾಟಿನ ಮೇಲೆ ಕೂರಿಸಿದ ನಂತರ ಈ ಘಟನೆ ಸಂಭವಿಸಿದೆ. ಇನ್ನೂ ಆ ಪುಟ್ಟಕಂದಮ್ಮ ಕೆಳಕ್ಕೆ ಬೀಳುವ ದೃಶ್ಯ ಅಲ್ಲೇ ಇದ್ದ ಸಿಸಿಟಿಯಲ್ಲಿ ಸೆರೆಯಾಗಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

(ಏಜೆನ್ಸೀಸ್)

ತಾಯಿ ಮತ್ತು ಮಗಳು ಮನೆಯಿಂದ ಹೊರಗೆ ಹೋಗಲು ಸಿದ್ಧರಾಗಿದ್ದಾರೆ. ಅವರಿಬ್ಬರೂ ಕೂಡ ಮನೆಯಿಂದ ಹೊರಬಂದು, ತಾಯಿ ಬಾಗಿಲನ್ನು ಲಾಕ್ ಮಾಡುತ್ತಿದ್ದಂತೆ, ಅನ್ವಿಕಾ ಅಲ್ಲೇ ಇದ್ದಂತಹ ಪಾದರಕ್ಷೆಯೊಂದಿಗೆ ನಡೆಯಲು ಪ್ರಾರಂಭಿಸಿದಳು. ಅವಳನ್ನು ಒಂದೇ ಸ್ಥಳದಲ್ಲಿ ಇರಿಸಲು, ತಾಯಿ ಅನ್ವಿಕಾಳನ್ನು ಎತ್ತಿಕೊಂಡು ಪ್ರವೇಶದ್ವಾರದ ಬಳಿ ಇದ್ದ ಶೂ ಕಪಾಟಿನ ಮೇಲೆ ಕೂರಿಸಿದರು. ನಂತರ ಮಗು ಕಪಾಟಿನ ಮೇಲೆ ನಿಂತು ಹತ್ತಿರದ ಕಿಟಕಿಯ ಮೇಲೆ ಹತ್ತಲು ಪ್ರಯತ್ನಿಸಿದೆ. ದುರಾದೃಷ್ಟವಶಾತ್​, ತಾಯಿ ಮಗುವನ್ನು ರಕ್ಷಿಸಲು ಬರುವಷ್ಟರಲ್ಲಿ ಆ ಮಗು ಸಮತೋಲನ ಕಳೆದುಕೊಂಡು 12 ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದೆ.ಇನ್ನೂ ಮಗು ಕೆಳಕ್ಕೆ ಬಿದ್ದ ತಕ್ಷಣ ತಾಯಿ ಕಿರುಚುತ್ತಿದ್ದಂತೆ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಅವರು ತಕ್ಷಣ ಬಾಲಕಿಯನ್ನು ವಸಾಯಿ ಪಶ್ಚಿಮದಲ್ಲಿರುವ ಸರ್ ಡಿಎಂ ಪೆಟಿಟ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net