ಗದಗ ಜಿಲ್ಲೆಯ ಚೆಕ್ ಪೋಸ್ಟ್​​ನಲ್ಲಿ 4 ಕೆ.ಜಿ ಚಿನ್ನಾಭರಣ ಜಪ್ತಿ!

gadaga gold
Published on

ಗದಗ: ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲಾಡಳಿತ ಭರ್ಜರಿ ಚಿನ್ನದ ಬೇಟೆಯನ್ನು ಮಾಡಿದೆ. ಗದಗ ನಗರದ ಹೊರವಲಯದ ಚೆಕ್ ಪೋಸ್ಟ್​​ನಲ್ಲಿ ಪೊಲೀಸರು ಭಾರಿ ಪ್ರಮಾಣದ ಚಿನ್ನದ ಜತೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

4 ಕಿಲೋ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ. ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬುವರ ಸೇರಿದ ಚಿನ್ನವಾಗಿದೆ ಎನ್ನಲಾಗಿದೆ.

ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ನಗರದ ಹೊರವಲಯದ ಚೆಕ್ ಪೋಸ್ಟ್​​ನಲ್ಲಿ ಬಾಂಬೆಯಿಂದ ಗದಗಕ್ಕೆ ತರುತ್ತಿದ್ದ ದಾಖಲೆ ಇಲ್ಲದ 4 ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಡಿಸಿ ವೈಶ್ಯಾಲಿ, ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಭಾರಿ ಪ್ರಮಾಣದ ಚಿನ್ನದ ಜತೆಗೆ ಆರೋಪಿಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net