ಆತನ ಹೊಟ್ಟೆಯೊಳಗಿತ್ತು 4 ಕೋಟಿ ಮೌಲ್ಯದ ಡ್ರಗ್ಸ್​! ಕಳ್ಳಸಾಗಣೆಗೆ ಬೇರೆಯದ್ದೇ ಮಾರ್ಗ ಕಂಡುಕೊಂಡ ಕದೀಮರು!

dr7ugs
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಡ್ರಗ್ಸ್​ ಪ್ರಕರಣಗಳು ದಾಖಲಾಗುತ್ತಿವೆ. ವಿದೇಶಗಳಿಂದ ವಿವಿಧ ರೀತಿಯಲ್ಲಿ ಡ್ರಗ್ಸ್​ ಕಳ್ಳಸಾಗಣೆ ಮಾಡುತ್ತಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಡ್ರಗ್ಸ್​ ಕಳ್ಳಸಾಗಣೆ ಮಾಡಲು ಬಳಸಿಕೊಂಡ ಮಾರ್ಗ ಕೇಳಿದರೆ ನೀವು ದಂಗಾಗುವುದು ಗ್ಯಾರಂಟಿ.

ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಗ್ಸ್​ ಕಳ್ಳಸಾಗಣೆಯಾಗುವ ಆಂತರಿಕ ಮಾಹಿತಿಯನ್ನು ಆಧರಿಸಿ, ಶನಿವಾರದಂದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಅಫ್ಘಾನಿಸ್ತಾನ ಮೂಲದ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆತನ ಹೊಟ್ಟೆಯ ಭಾಗದಲ್ಲಿ ಅನುಮಾನಾಸ್ಪದ ವಸ್ತು ಇರುವ ಅನುಮಾನ ಬಂದಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಒಂದು ದೊಡ್ಡ ರಹಸ್ಯ ಬಯಲಾಗಿದೆ.

ಅಫ್ಘಾನ್​ ವ್ಯಕ್ತಿಯ ಹೊಟ್ಟೆಯೊಳಗೆ ಬರೋಬ್ಬರಿ 89 ಪ್ಲಾಸ್ಟಿಕ್​ ಮಾತ್ರೆಗಳು ಸಿಕ್ಕಿವೆ. ಅದನ್ನೆಲ್ಲ ನಾರ್ಕೋಟಿಕ್ಸ್​ ವಿಭಾಗದಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅದು ಹೆರಾಯಿನ್​ ಎನ್ನುವುದು ಗೊತ್ತಾಗಿದೆ. 89 ಮಾತ್ರೆಗಳಲ್ಲಿ ಬರೋಬ್ಬರಿ 635 ಗ್ರಾಂ ಹೆರಾಯಿನ್​ ಅನ್ನು ಕಳ್ಳಸಾಗಣೆ ಮಾಡಲು ಆತ ಪ್ರಯತ್ನಿಸಿದ್ದ. ಈ ಡ್ರಗ್ಸ್​ನ ಬೆಲೆ ಸುಮಾರು 4 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net