

ನವದೆಹಲಿ, ಜೂನ್ 09: ಲೋಕಸಭಾ ಚುನಾವಣೆ 2024 ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಕಡೆಗೂ ಎನ್ಡಿಎಗೆ ಬಹುಮತ ಲಭಿಸಿದೆ. ಈ ಹಿನ್ನೆಲೆ ಇದೀಗ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ತಮ್ಮ ಸಂಪುಟದಲ್ಲಿ 63 ಸಂಸದರಿಗೆ ಮಂತ್ರಿ ಸ್ಥಾನ ಹಸ್ತಾಂತರಿಸಲಿದ್ದು, ಕರ್ನಾಟಕದಿಂದ ಐದು ಸಂಸದರಿಗೆ ಮಂತ್ರಿ ಭಾಗ್ಯ ಸಿಗುವ ನಿರೀಕ್ಷೆಯಿದೆ.
ಇಂದು (ಜೂನ್ 09) ಸಂಜೆ 7:15ಕ್ಕೆ ಪ್ರಧಾನಿ ಮೋದಿ ಪಟ್ಟಾಭಿಷೇಕ ನೆರವೇರಲಿದ್ದು, ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಮೂರನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮಹತ್ವ ಸಚಿವ ಖಾತೆಗಳನ್ನು ನರೇಂದ್ರ ಮೋದಿಯವರು ಬಿಜೆಪಿಗೆ ಉಳಿಸಿಕೊಳ್ಳುವುದು ಖಚಿತವಾಗಿದ್ದು, ಉಳಿದ ಖಾತೆಗಳನ್ನು ಮೈತ್ರಿ ಪಕ್ಷದ ಸಂಸದರಿಗೆ ಹಂಚಲಿದ್ದಾರೆ.
ಕರ್ನಾಟಕದಿಂದ ಈ ಐವರು ಸಂಸದರಿಗೆ ಮಂತ್ರಿ ಭಾಗ್ಯ ಸಿಗುವ ಸಾಧ್ಯತೆಗಳಿವೆ: