3,500 ಕೋಳಿ ಮರಿ ಸಾವು

poultry farm
ಅರಹತೊಳಲಿನ ಮಹೇಶ್ ಎಂಬುವವರ ಫಾರ್ಮ್‌ಗೆ ನೀರು ನುಗ್ಗಿ ನೆನೆದು ಒದ್ದೆಯಾಗಿರುವ ಕೋಳಿ ಮರಿಗಳು.
Published on

ಹೊಳೆಹೊನ್ನೂರು: ಅರಹತೊಳಲು ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿ 3,500 ಕೋಳಿ ಮರಿಗಳು ಮೃತಪಟ್ಟಿವೆ.

ಅರಹತೊಳಲು ಗ್ರಾಮದ ಮಹೇಶ್ ಎಂಬುವವರು ಕಂಪನಿಯೊಂದರ ಜತೆಗೆ ಒಡಂಬಡಿಕೆ ಮಾಡಿಕೊಂಡು 6 ಸಾವಿರ ಕೋಳಿ ಮರಿಗಳನ್ನು ಸಾಕುತ್ತಿದ್ದರು. ಭಾನುವಾರ ರಾತ್ರಿ ಇಡೀ ಮಳೆ ಸುರಿದ ಪರಿಣಾಮ ಫಾರ್ಮ್ ಪಕ್ಕದಲ್ಲೇ ಇರುವ ಗೋಂದಿ ನಾಲೆ ಭರ್ತಿಯಾಗಿ ನೀರು ಹರಿಯಲಾರಂಭಿಸಿತು. ನೀರಿನ ಪ್ರಮಾಣ ದಿಢೀರ್ ಹೆಚ್ಚಾಗಿ ನಿಯಂತ್ರಣಕ್ಕೆ ಬಾರದ ಕಾರಣ ಫಾರ್ಮ್‌ಗೆ ನುಗ್ಗಿತು. ನೀರಿನ ರಭಸಕ್ಕೆ 3,500 ಮರಿಗಳು, ಭತ್ತದ ಹೊಟ್ಟು, ಕೋಳಿ ಆಹಾರ ಕೊಚ್ಚಿಹೋಗಿದೆ. ನೀರಿನಲ್ಲಿ ನೆನೆದು ಒದ್ದೆಯಾಗಿರುವ ಕೆಲವು ಮರಿಗಳು ಸಹ ಬದುಕುವ ಸಾಧ್ಯತೆ ಇಲ್ಲ ಎಂದು ಪಶುವೈದ್ಯರು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net