ತೀರ್ಥಹಳ್ಳಿಯಲ್ಲಿ 33 ಸೂಕ್ಷ್ಮ ಕೇಂದ್ರಗಳು

tth evm
ತೀರ್ಥಹಳ್ಳಿಯ ಡಾ. ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿರುವ ಮಸ್ಟರ್ ಕೇಂದ್ರದಿಂದ ಮತದಾನದ ಪರಿಕರಗಳೊಂದಿಗೆ ಮತಗಟ್ಟೆಗಳ ಕಡೆಗೆ ಹೊರಟ ಸಿಬ್ಬಂದಿ.
Published on

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 258 ಮತದಾನ ಕೇಂದ್ರಗಳಲ್ಲಿ 33 ಸೂಕ್ಷ್ಮ ಮತ್ತು 07 ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ 1900 ಸಿಬ್ಬಂದಿಯನ್ನು ಅಣಿಗೊಳಿಸಲಾಗಿದೆ.

ಕ್ಷೇತ್ರ ವ್ಯಾಪ್ತಿಯ 33 ಸೂಕ್ಷ್ಮ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಗಾಗಿ ಡಿವೈಎಸ್ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಕೇಂದ್ರ ಮೀಸಲು ಪಡೆಯ 25 ಮಂದಿ, ಇಬ್ಬರು ಡಿವೈಎಸ್ಪಿ, 3 ಸಿಪಿಐ ಮತ್ತು 13 ಪಿಎಸ್‌ಐ ಸೇರಿ 520 ಮಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರಗಳಲ್ಲೂ ಭದ್ರತಾ ಸಿಬ್ಬಂದಿ ಹೊರತುಪಡಿಸಿ ತಲಾ 7 ಏಳು ಸಿಬ್ಬಂದಿ ಮತದಾನ ಕಾರ್ಯನಿರ್ವಹಿಸಲಿದ್ದಾರೆ.
ಮಹಿಳಾ ಮತದಾರರುಹೆಚ್ಚಿರುವ ಮೇಳಿಗೆ ಗ್ರಾಪಂ ವ್ಯಾಪ್ತಿಯ ಗೋಪಾಲಪುರ, ಕಟ್ಟೇಹಕ್ಕಲು ಗ್ರಾಪಂ ವ್ಯಾಪ್ತಿಯ ಮಕ್ಕಿಮನೆ, ಮೇಲಿನತೂದೂರು, ಪಟ್ಟಣದ ಶೀಬಿನಕೆರೆ ಮತ್ತು ಬೆಟ್ಟಮಕ್ಕಿ ಬೂತ್‌ಗಳನ್ನು ಸಖಿ ಕೇಂದ್ರಗಳೆಂದು ಗುರುತಿಸಲಾಗಿದೆ. ಅಗ್ರಹಾರ ಹೋಬಳಿಯ ಕೋದೂರು ಪಿಡಬ್ಲುೃಡಿ ಕೇಂದ್ರವೆಂದು, ಪಟ್ಟಣದ ಬಾಳೆಬೈಲು ಯುವ ಕೇಂದ್ರ, ಪಟ್ಟಣದ ಕುವೆಂಪು ಶಾಲೆಯ ಕೇಂದ್ರವನ್ನು ಸಾಂಪ್ರದಾಯಿಕ ಮತಗಟ್ಟೆ, ಪಟ್ಟಣದ ಬೆಟ್ಟಮಕ್ಕಿ ಕೇಂದ್ರವನ್ನು ಮಾದರಿ ಕೇಂದ್ರ ಹಾಗೂ ಗುಡ್ಡೇಕೊಪ್ಪ ಕೇಂದ್ರವನ್ನು ಸಾಂಸ್ಕೃತಿಕ ಮತದಾನ ಕೇಂದ್ರ ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net