

ಸೊರಬ: ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಹಣ ಎಣಿಕೆ ಕಾರ್ಯ ಆಡಳಿತ ಮಂಡಳಿ ಕಚೇರಿಯಲ್ಲಿ ಗುರುವಾರ ನಡೆಯಿತು. ಎರಡನೇ ತ್ರೈಮಾಸಿಕದಲ್ಲಿ 32,34,350 ರೂ. ಕಾಣಿಕೆ ಸಂಗ್ರಹವಾಗಿದೆ. ಕಳೆದ ಮಾರ್ಚ್‌ನಲ್ಲಿ 18,18,480 ರೂ. ಸಂಗ್ರಹವಾಗಿತ್ತು. ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತಲು ಸಿ ಸಿ ಕ್ಯಾಮರಾಗಳನ್ನು ಆಳವಡಿಸಲಾಗಿತ್ತು. ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಎಣಿಕೆ ಕಾರ್ಯದಲ್ಲಿ ಸೊರಬ ತಹಸೀಲ್ದಾರ್ ಮಂಜುಳಾ ಹೆಗಡಾಳ್, ದೇವಸ್ಥಾನದ ಇಒ ಜಿ.ಕೆ.ಪ್ರಮೀಳಾಕುಮಾರಿ, ಶಿರಸ್ತೇದಾರ್ ರಮೇಶ್, ನಾಡಕಚೇರಿ ಉಪ ತಹಸೀಲ್ದಾರ್ ಲಲಿತಾ, ಚಂದ್ರಗುತ್ತಿ ರಾಜಸ್ವ ನಿರೀಕ್ಷಕ ವಿನೋದ್, ಮುಜರಾಯಿ ಇಲಾಖೆ ವಿಶೇಷ ನಿರ್ವಾಹಕಿ ಎಂ.ಶ್ರುತಿ, ಕೆನರಾ ಬ್ಯಾಂಕ್ ಶಾಖೆ ಸಹಾಯಕ ವ್ಯವಸ್ಥಾಪಕ, ಗ್ರಾಮ ಲೆಕ್ಕಿಗರು ಇತರರಿದ್ದರು.