

ಲಾಹೋರ್: ಶುಕ್ರವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಏಕದಿನ ಪಂದ್ಯದ ವೇಳೆ ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾಲೆಳೆದಿದ್ದಾರೆ.
ಇನ್ನು ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದ ವೇಳೆ 30 ಯಾರ್ಡ್ ಸರ್ಕಲ್ ಅನ್ನು ಮೈದಾನದ ಸಿಬ್ಬಂದಿ ತಪ್ಪಾಗಿ ರಚಿಸಿದ್ದರು.
ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಉರ್ಫಿಯ ಈ ಹೊಸ ಅವತಾರ!
ಇದನ್ನು ಗಮನಿಸಿದ ಅಂಪೈರ್ಗಳಾದ ಅಲೀಮ್ ದಾರ್ ಹಾಗೂ ರಶೀದ್ ರಿಯಾಜ್ ತಕ್ಷಣವೇ ಮೈದಾನದ ಸಿಬ್ಬಂದಿಗೆ ತಪ್ಪನ್ನು ಸರಿಪಡಿಸುವಂತೆ ಸೂಚಿಸಿದ್ದರು.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಂದ್ಯದ ಮಧ್ಯದಲ್ಲಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಹುದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಈ ರೀತಿಯ ಘಟನೆಯನ್ನು ನಾವು ನೋಡುತ್ತಿರುವುದು ಇದೇ ಮೊದಲು ಇವರು ಏಷ್ಯಾ ಕಕಪ್ ಆಯೋಜನೆ ಮಾಡಲು ಸಿದ್ದರಾಗಿರುವುದಾಗಿ ಹೇಳುತ್ತಿದ್ದಾರೆ ಎಂದು ಕೆಲವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ.