

Lawyers Fight: ದೆಹಲಿ ಮೂಲದ ದಿವಂಗತ ಉದ್ಯಮಿ ಸಂಜಯ್ ಕಪೂರ್ ಕುಟುಂಬದ 30 ಸಾವಿರ ಕೋಟಿ ರೂ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕರೀಷ್ಮಾ ಕಪೂರ್ ಮಕ್ಕಳು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಇಬ್ಬರು ಪ್ರಮುಖ ವಕೀಲರ ನಡುವಿನ ವಾದವಿವಾದ ನಡೆದು ತೀವ್ರ ವಾಗ್ವಾದಕ್ಕೆ ದೆಹಲಿ ಹೈಕೋರ್ಟ್ ಸಾಕ್ಷಿಯಾಗಿದ್ದು, ವಾಗ್ವಾದ 20 ಸೆಕೆಂಡುಗಳ ವಿಡಿಯೋ ವೈರಲ್ ಆಗಿದೆ.
ಸಂಜಯ್ ಕಪೂರ್ ಅವರ 30 ಸಾವಿರ ಕೋಟಿ ರೂ. ಆಸ್ತಿಯಲ್ಲಿ ಪಾಲು ಕೇಳಿ ಕರೀಷ್ಮಾ ಕಪೂರ್ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ರಾಜ್ ಕಪೂರ್ ಪರವಾಗಿ ಹಿರಿಯ ವಕೀಲ ಮಹೇಶ್ ಜೆಠ್ಮಾಲನಿ, ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಸಚ್ಚದೇವ್ ಕಪೂರ್ ಪರವಾಗಿ ರಾಜೀವ್ ನಾಯರ್ ವಾದಿಸುತ್ತಿದ್ದು, ಶುಕ್ರವಾರ ಇಬ್ಬರ ನಡುವೆ ವೈಯಕ್ತಿಕ ಮಟ್ಟದ ವಾಗ್ವಾದ ನಡೆದಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ವಾದಗಳನ್ನು ಆಲಿಸುತ್ತಿದ್ದಾಗ ವಕೀಲರು ಪರಸ್ಪರ ಕೋಪಗೊಂಡಿದ್ದು, ವಿಡಿಯೋದಲ್ಲಿ ದಾಖಲಾಗಿದೆ. ಪ್ರಿಯಾ ಪರ ವಕೀಲ ರಾಜೀವ್ ನಾಯರ್, ಜೆಠ್ಮಾಲನಿ ಅವರಿಗೆ ದಯವಿಟ್ಟು ನನ್ನನ್ನು ಅಡ್ಡಿಪಡಿಸಬೇಡಿ, ನನಗೆ ಅಡ್ಡಿಪಡಿಸುವ ಅಭ್ಯಾಸವಿಲ್ಲ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಜೇಠ್ಮಲಾನಿ ಕೋಪದಿಂದ ಉತ್ತರಿಸಿದ್ದು, ಹಾಗಾದರೆ ನೀವು ನಿಮ್ಮ ಸ್ವಂತ ಔಷಧದ ರುಚಿಯನ್ನು ಪಡೆಯಬೇಕು, ಮತ್ತು ನನ್ನ ಮೇಲೆ ಕೂಗಬೇಡಿ. ನಾನು ತಳ್ಳುವವನಲ್ಲ ಎಂದು ಮರು ಉತ್ತರ ನೀಡಿದ್ದಾರೆ.
ಮತ್ತೆ ನೀವೇ ನನಗೆ ಅಡ್ಡಿಪಡಿಸಿದ್ದೀರಿ ಎಂದು ನಾಯರ್ ಹೇಳಿದರೆ, ನನ್ನ ಮೇಲೆ ಕೂಗಾಡಬೇಡಿ. ಪರಿಷತ್ತಿಗೆ ಸ್ವಲ್ಪ ಸೌಜನ್ಯ ತೋರಿಸಿ. ನೀವು ಕೂಗಿದರೆ, ನಿಮಗೆ ನಾಣ್ಯದ ರೂಪದಲ್ಲಿ ಹಣ ಸಿಗುತ್ತದೆ ಎಂದಿದ್ದಾರೆ. ಹೀಗೆ ಇಬ್ಬರು ಪರಸ್ಪರ ವೈಯಕ್ತಿಕ ಮಟ್ಟದಲ್ಲಿ ಕಿತ್ತಾಡಿಕೊಂಡಿದ್ದಾರೆ.
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಈ ವರ್ಷ ಜೂನ್ 12 ರಂದು ನಿಧನರಾದರು. ಮಲತಾಯಿ ಪ್ರಿಯಾ ನಕಲಿ ವಿಲ್ ರಚಿಸಿ ಆಸ್ತಿಯ ಪಾಲು ಕೊಡುವುದರಿಂದ ನಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಕರೀಷ್ಮಾ ಪೂರ್ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. (ಏಜೆನ್ಸೀಸ್)