30 ಡಿವೈಎಸ್‌ಪಿ ಹುದ್ದೆಗಳು ಎಎಸ್‌ಪಿ ಮೇಲ್ದರ್ಜೆಗೆ

Police
Published on

ಬೆಂಗಳೂರು: ಆರು ಐಜಿ ವಲಯಗಳ ಆಡಳಿತ ವಿಭಾಗ ಸೇರಿ ವಿವಿಧ ಪೊಲೀಸ್ ಘಟಕಗಳಲ್ಲಿ 30 ಡಿವೈಎಸ್ಪಿ ಹುದ್ದೆಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹುದ್ದೆಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶಿಸಿದೆ.

ರಾಜ್ಯದ 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳಿದ್ದು, ಇನ್ನುಳಿದ 6 ಜಿಲ್ಲೆಗಳಲ್ಲಿ ಎಎಸ್‌ಪಿ ಹುದ್ದೆ ಇರುವುದಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕರ್ತವ್ಯದ ಒತ್ತಡ ತಗ್ಗಿಸಲು ಮತ್ತು ಆಡಳಿತಾತ್ಮಕವಾಗಿ ನೆರವಾಗಲು ಈ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಗದಗ, ವಿಜಯಪುರ, ಧಾರವಾಡ, ಬಾಗಲಕೋಟೆ, ಕಲುಬರಗಿ, ಬಳ್ಳಾರಿ, ವಿಜಯನಗರ, ಐಜಿಪಿ ವಲಯಗಳಾದ ಕೇಂದ್ರ, ದಕ್ಷಿಣ, ಉತ್ತರ, ಈಶಾನ್ಯ, ಪೂರ್ವ, ಪಶ್ಚಿಮ, ಸಿಐಡಿ ಹಾಗೂ ಸಿಐಡಿ ಅರಣ್ಯ ಘಟಕಕ್ಕೆ ತಲಾ ಎರಡು ಹುದ್ದೆಗಳನ್ನು ಮೇಲ್ದರ್ಜೇಗೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net