ಸೇನಾ ವಾಹನ ಉರುಳಿಬಿದ್ದು ಹೊತ್ತಿಕೊಂಡ ಬೆಂಕಿ: ಮೂವರು ಯೋಧರು ಹುತಾತ್ಮ, ಐವರಿಗೆ ಗಾಯ

Soldiers
Published on

ಜೈಪುರ: ಸೇನಾ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದ್ದು, ಅವಗಢದಲ್ಲಿ ಇತರೆ ಐವರು ಯೋಧರು ಸಹ ಗಾಯಗೊಂಡಿದ್ದಾರೆ.

ಗುರುವಾರ ಮುಂಜಾನೆ ಗಂಗಾನಗರದ ರಾಜಿಯಾಸರ್​ ಏರಿಯಾದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಪ್ಸಿ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿತು. ಗಾಯಗೊಂಡ ಐವರು ಯೋಧರು ವಾಹನದಿಂದ ಹೊರಬಂದರು. ಆದರೆ, ಮೂವರು ಅಲ್ಲಿಯೇ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಟೇಷನ್​ ಹೌಸ್​ ಆಫೀಸರ್​ (ಎಸ್​ಎಸ್​ಒ) ವಿಕ್ರಮ್​ ತಿವಾರಿ ಹೇಳಿದ್ದಾರೆ.

ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್​ಎಚ್​ಒ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net