ಕಾರ್ವಿುಕರ ರಕ್ಷಣೆಗೆ ಬೇಕಿದೆ ಇನ್ನೂ ಮೂರು ದಿನ!: ಉತ್ತರಕಾಶಿ ಸುರಂಗ ಕುಸಿತ ಪ್ರಕರಣ; ಅಮೆರಿಕದ ಅತ್ಯಾಧುನಿಕ ಯಂತ್ರದ ಮೂಲಕ ಡ್ರಿಲ್ಲಿಂಗ್ ಆರಂಭ

Tunnel
Published on

ಉತ್ತರಕಾಶಿ: ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದ ಪರಿಣಾಮ ಅದರಲ್ಲಿ ಸಿಲುಕಿರುವ 40 ಕಾರ್ವಿುಕ ರಕ್ಷಣಾ ಕಾರ್ಯಾಚರಣೆ ಐದನೇ ದಿನವಾರ ಗುರುವಾರವೂ ಮುಂದುವರಿದಿದೆ. ರಕ್ಷಣಾ ಕಾರ್ಯ ಪೂರ್ಣಗೊಳ್ಳಲು ಇನ್ನೂ ಮೂರು ದಿನ ಹಿಡಿಯಬಹುದು ಎಂದು ಅಂದಾಜು ಮಾಡಲಾಗಿದೆ.

ಅಮೆರಿಕದಿಂದ ತರಲಾದ ಅತ್ಯಾಧುನಿಕ ಡ್ರಿಲ್ಲಿಂಗ್ ಯಂತ್ರದ ಮೂಲಕ ಗುರುವಾರ ಕಾರ್ಯಾಚರಣೆ ಆರಂಭಿಸಲಾಗಿದೆ. ಬೃಹತ್ ಗಾತ್ರದ ಡ್ರಿಲ್ಲಿಂಗ್ ಯಂತ್ರವನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ದೆಹಲಿಯಿಂದ ಉತ್ತರಕಾಶಿಗೆ ತರಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದ ಮಾಹಿತಿ ಪಡೆದರು.

ಹೊಸ ಡ್ರಿಲ್ಲಿಂಗ್ ಯಂತ್ರವು ಈಗಾಗಲೇ ಶಿಲಾಖಂಡ ಮೂಲಕ 7 ಮೀಟರ್ ಒಳಗೆ ನುಸುಳಿದೆ. ಕಾರ್ವಿುಕರು ಸಿಲುಕಿರುವ ಪ್ರದೇಶವನ್ನು ಇದು ತಲುಪಿದ ನಂತರ, ಇದರ ಕೊಳವೆಯ ಮೂಲಕ ಒಬ್ಬೊಬ್ಬರಾಗಿ ಕಾರ್ವಿುಕರನ್ನು ಹೊರಗೆ ತರಲಾಗುತ್ತದೆ. ಪ್ರತಿ ಗಂಟೆಗೆ 5-10 ಮೀಟರ್ ದೂರ ಕೊರೆಯಲಾಗುತ್ತದೆ. ಮೊದಲ ಡ್ರಿಲ್ಲಿಂಗ್ ಮೆಷಿನ್ ತುಂಬಾ ನಿಧಾನವಾಗಿತ್ತು. ತಾಂತ್ರಿಕ ಸಮಸ್ಯೆಗಳೂ ಕಾಣಿಸಿಕೊಂಡ ನಂತರ ಹೊಸ ಯಂತ್ರವನ್ನು ತರಿಸಲಾಯಿತು ಎಂದು ಅಧಿಕಾರಗಳು ತಿಳಿಸಿದ್ದಾರೆ.

ಕಾರ್ವಿುಕರು ಸುರಕ್ಷಿತ: ನಿರ್ಮಾಣ ಹಂತದಲ್ಲಿದ್ದ ಸುರಂಗ ಕಳೆದ ಭಾನುವಾರ 40 ಮೀಟರ್​ನಷ್ಟು ಕುಸಿದಿದೆ. ಸುರಂಗದ ಪ್ರವೇಶ ದ್ವಾರದಿಂದ 270 ಮೀಟರ್ ಅಂತರದಲ್ಲಿ ಕಾರ್ವಿುಕರು ಸಿಲುಕಿದ್ದಾರೆ. ಸದ್ಯ ಅವರೆಲ್ಲರೂ ಸುರಕ್ಷಿತ ವಾಗಿದ್ದಾರೆ. ಪೈಪ್​ಗಳ ಮೂಲಕ ಆಮ್ಲಜನಕ, ಔಷಧ, ಆಹಾರ ಪದಾರ್ಥ ಮತ್ತು ನೀರು ಒದಗಿಸಲಾಗುತ್ತಿದೆ. ಕಾರ್ವಿುಕರು ಇರುವ ಸ್ಥಳದಲ್ಲಿ ಕುಸಿತ ಸಂಭವಿಸಿಲ್ಲ ಎಂದು ಕಾಮಗಾರಿ ನಡೆಸುತ್ತಿರುವ ನವಯುಗ ಇಂಜಿನಿಯರಿಂಗ್ ಕಂಪನಿಯ ವಕ್ತಾರ ಜಿ.ಎಲ್. ನಾಥ್ ತಿಳಿಸಿದ್ದಾರೆ.

ಅಧಿಕಾರಿಗಳು ಅಂತಾರಾಷ್ಟ್ರೀಯ ತಜ್ಞರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ಸುರಂಗಗಳನ್ನು ಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ. | ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಸಿಎಂ

ರಕ್ಷಣೆ ಹೇಗೆ?: 900 ಮಿಮೀ ವ್ಯಾಸದ ಉಕ್ಕಿನ ಕೊಳವೆಗಳನ್ನು ಕೊರೆದು, ಕಾರ್ವಿುಕರು ಇರುವ ಸ್ಥಳವನ್ನು ಸಂರ್ಪಸಲಾಗುತ್ತದೆ. ನಂತರ ಕಾರ್ವಿುಕರು ಈ ಕೊಳವೆ ಮೂಲಕ ತೆವಳಿಕೊಂಡು ಸುರಂಗದ ಹೊರಗೆ ಬರಬೇಕು. ಸುರಂಗದಿಂದ ರಕ್ಷಿಸಲ್ಪಡುವ ಕಾರ್ವಿುಕರಿಗಾಗಿ ಆರು ಹಾಸಿಗೆಗಳ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಸುರಂಗದ ಹೊರಗೆ ತಜ್ಞ ವೈದ್ಯರೊಂದಿಗೆ 10 ಆಂಬುಲೆನ್ಸ್ ಗಳನ್ನು ಇರಿಸಲಾಗಿದೆ. ಕಾರ್ವಿುಕರು ಹೊರಬಂದ ತಕ್ಷಣ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವರ ಕೋಪ ಘಟನೆಗೆ ಕಾರಣ!: ಉತ್ತರಕಾಶಿ ಸುರಂಗ ಕುಸಿತಕ್ಕೆ ದೇವರ ಕೋಪವೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಾಮಗಾರಿಗಾಗಿ ಇತ್ತೀಚೆಗೆ ದೇವಾಲಯವೊಂದನ್ನು ನೆಲಸಮ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವರು ಕೋಪಗೊಂಡಿದ್ದಾನೆ. ದೇವರನ್ನು ಸಮಾಧಾನಪಡಿಸದ ಹೊರತು ರಕ್ಷಣಾ ಪ್ರಯತ್ನಗಳು ಫಲ ಕೊಡುವುದಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಅಧಿಕಾರಿಗಳು ಮತ್ತು ಕಾರ್ವಿುಕರು ದಿನದ ಕೆಲಸವನ್ನು ಪ್ರಾರಂಭಿಸುವ ಮೊದಲು ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಂಪನಿಯು ದೇವಾಲಯವನ್ನು ನೆಲಸಮ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net