27 ವರ್ಷದ ಐಐಎಂ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

Ayush Gupta
Published on

ಬೆಂಗಳೂರು: ಚಿಕ್ಕವಯಸ್ಸಿನವರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣ ಮುಂದುವರಿದಿದ್ದು, ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ 27 ವರ್ಷದ ಯುವಕ ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ನಡೆದಿದೆ.

ಇಂಡಿಯನ್​ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್​(ಐಐಎಂ) ಬೆಂಗಳೂರು ಇದರ ವಿದ್ಯಾರ್ಥಿ ಆಯುಷ್ ಗುಪ್ತ ಸಾವಿಗೀಡಾದವರು. ಐಐಎಂಬಿಯಲ್ಲಿ ಪೋಸ್ಟ್​ ಗ್ರ್ಯಾಜುವೇಟ್​ ಪ್ರೋಗ್ರಾಮ್ ಇನ್ ಮ್ಯಾನೇಜ್​ಮೆಂಟ್ ಕೋರ್ಸ್​ ಮಾಡುತ್ತಿದ್ದ ಆಯುಷ್ ಭಾನುವಾರ ಹೃದಯಾಘಾತದಿಂದ ನಿಧನರಾದರು.

ನಮ್ಮ ಎರಡನೇ ವರ್ಷದ ಪಿಜಿಪಿ ವಿದ್ಯಾರ್ಥಿ ಆಯುಷ್ ಗುಪ್ತ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಇವರು ಈ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಆಯುಷ್ ಪಿಜಿಪಿಯ ಸ್ಟುಡೆಂಟ್ ಅಲುಮ್ನಿ ಕಮಿಟಿಯ ಸೀನಿಯರ್​ ಕೋಆರ್ಡಿನೇಟರ್ ಆಗಿದ್ದರು ಎಂದು ಐಐಎಂಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಟ್ವೀಟ್​ ಮಾಡಲಾಗಿದೆ. ಇದಕ್ಕೆ ಅಪಾರ ಪ್ರತಿಕ್ರಿಯೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net