ಮ್ಯಾಟ್ರಿಕ್ ಅಬಾಕಸ್ ಕೇಂದ್ರಕ್ಕೆ 27 ಪದಕ

abacus
ರಾಜ್ಯಮಟ್ಟದ ಮ್ಯಾಟ್ರಿಕ್ಸ್ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಬಾಳೆಹೊನ್ನೂರು ಅಬಾಕಸ್ ಕೇಂದ್ರದ ವಿದ್ಯಾರ್ಥಿಗಳು. ಪ್ರಾಚಾರ್ಯೆ ರಜನಿ ದೇವಯ್ಯ, ರೆನ್ನಿ ದೇವಯ್ಯ ಇದ್ದರು.
Published on

ಬಾಳೆಹೊನ್ನೂರು: ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮ್ಯಾಟ್ರಿಕ್ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಟ್ಟಣದ ಮ್ಯಾಟ್ರಿಕ್ ಅಬಾಕಸ್ ಕೇಂದ್ರಕ್ಕೆ 27 ಪದಕ ಲಭಿಸಿದೆ ಎಂದು ಕೇಂದ್ರದ ಪ್ರಾಚಾರ್ಯೆ ರಜನಿ ದೇವಯ್ಯ, ರೆನ್ನಿ ದೇವಯ್ಯ ತಿಳಿಸಿದ್ದಾರೆ.
ಮೊದಲ ಹಂತದ ಪರೀಕ್ಷೆಯಲ್ಲಿ ದೀಕ್ಷಿತಾ, ಎವನ್ ನಿ. ಚೆನ್ನಿ, ರವೀಂದ್ರ ಸಿಂಗ್ ಚೌಧರಿ, ಸರ್ವದ್ ಪಟೇಲ್, ಯಶವಂತ್ ಗೌಡ, ಸಾತ್ವಿಕ್ (ಚಿನ್ನದ ಪದಕ), ಅಕ್ಷ್ಯ, ಅಂಶುಮನ್, ಭುವನ್ ರಾವ್, ಚಿರಂತ್, ಡಿಯಾನ್ ಪ್ರಿಸ್ಬನ್, ಲೇಶನಾ, ಮೆಲ್ವಿನಾ, ನಿಶ್ಚಿತ್ ಹಿಲಾರಿ ಮಿಸ್ಕಿತ್, ಶ್ಲೇಷ್ (ಬೆಳ್ಳಿ), ಆರ್ಕಮ್, ಚೇತನ್, ರಾಪ್ಲದ್ ರಿಯಾನ್ಸ್, ಸ್ಮಯ ನೂತನ್, ಸ್ವರೂಪ್ (ಕಂಚು) ಗಳಿಸಿದ್ದಾರೆ.
ಎರಡನೇ ಹಂತದಲ್ಲಿ ರಿಶಿತ್ (ಚಿನ್ನ), ಇಸಾನ್ (ಬೆಳ್ಳಿ), ಮೂರನೇ ಹಂತದಲ್ಲಿ ಅದ್ವೀತ್ (ಚಿನ್ನ), ಇಸಾನ್ (ಬೆಳ್ಳಿ), ಅದ್ವೀತ್ (ಚಿನ್ನ), ಅನ್ವಿತ್, ಕೃಪಾಲಿ (ಬೆಳ್ಳಿ), ಶ್ರಾವ್ಯಾಚಿನ್ನದ ಪದಕ ಗಳಿಸಿದ್ದಾರೆ. ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net