

ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ(Baba Siddique Murder) ಮಾಡಿದ ಆರೋಪಿಗಳ ಪೈಕಿ ನಾಲ್ವರಿಗೆ 25 ಲಕ್ಷ ರೂ. ನಗದು ಹಣ, ಫ್ಲ್ಯಾಟ್, ಕಾರು ಮತ್ತು ದುಬೈ ಪ್ರವಾಸದ ಭರವಸೆ ನೀಡಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಒಬ್ಬರಾದ ರಾಮ್ಚಂದ್ಪೂಲ್ ಕನೋಜಿಯಾ ಎಂಬಾತನಿಂದ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ಕು ಯುವ ಆರೋಪಿಗಳಿಗೆ ಈ ಭರವಸೆ ನೀಡಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಯುವ ಆರೋಪಿಗಳಾದ ರೂಪೇಶ್ ಮೊಹೋಲ್ (22), ಶಿವಂ ಕೊಹಾದ್ (20), ಕರಣ್ ಸಾಳ್ವೆ (19), ಮತ್ತು ಗೌರವ್ ಅಪುಣೆ (23) ಅವರಿಗೆ ದುಬೈಗೆ ಪ್ರವಾಸದ ಭರವಸೆ ಜತೆಗೆ 25 ಲಕ್ಷ ರೂ. ನಗದು, ಫ್ಲ್ಯಾಟ್ ಮತ್ತು ಕಾರು ಕೊಡುವುದಾಗಿ ಹೇಳಿದ್ದರು. ಈ ಕೃತ್ಯಕ್ಕೆ ಜೀಶನ್ ಅಖ್ತರ್ ಎಂಬಾತನಿಂದ ಕನೋಜಿಯಾ ಹಣ ಪಡೆಯುತ್ತಿದ್ದ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾನೆ.
ಇನ್ನು ಜೀಶನ್ ಅಖ್ತರ್ ಪರಾರಿಯಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಇತನು 10 ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿದ್ದಾನೆ ಎಂಬ ಆರೋಪ ಇದೆ. ಕೊಲೆ ಬಂಧಿತ ಆರೋಪಿಗಳಿಗೆ 4 ಲಕ್ಷಕ್ಕೂ ಅಧಿಕ ಹಣವನ್ನು ಕಳುಹಿಸಿದ್ದನು ಎನ್ನಲಾಗಿದೆ. ಈ ನಾಲ್ವರು ಆರೋಪಿಗಳು ಬಡ ಕುಟುಂಬಕ್ಕೆ ಸೇರಿದ್ದು, ಈ ನಾಲ್ವರು ಶೂಟರ್‌ಗಳಲ್ಲಿ ಒಬ್ಬರು ಪುಣೆ ಬಳಿಯ ಖಡಕ್ವಾಸ್ಲಾ ಬಳಿ ತರಬೇತಿ ಪಡೆದಿದ್ದರು ಎಂಬುದು ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ.
ಇದೇ ಆ.12ರಂದು ಮುಂಬೈನ ಬಾಂದ್ರ ಪ್ರಾಂತ್ಯದಲ್ಲಿ ಬಾಬಾ ಸಿದ್ದಿಕಿ ಅವರನ್ನ ಎದೆಗೆ ಗುಂಡುಕ್ಕಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)