ಕೆನಡಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು: 24 ವರ್ಷದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ

chirag
Published on

ಕೆನಡಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕ ಸೇರಿದಂತೆ ವಿದೇಶಿಗಳಿಗೆ ವಲಸೆ ಹೋಗುವ ವಿದ್ಯಾರ್ಥಿಗಳು ಹತ್ಯೆಗೀಡಾಗುವ, ಕಿಡ್ನಾಪ್​, ಮಾರಣಾಂತಿಕ ಹಲ್ಲೆಗೆ ತುತ್ತಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.

ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿಸಾವು ವಿದೇಶಗಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ನಡುಕು ಹುಟ್ಟಿಸಿದೆ. ಅಮೆರಿಕ ಹಾಗೂ ಕೆನಡಾ ಸೇರಿದಂತೆ ಇತರೆ ದೇಶಗಳಲ್ಲಿ ಇರುವ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದ್ದು, ಕೆನಡಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.

ಈ ವರ್ಷ ಅಮೆರಿಕದಲ್ಲಿ ನಡೆಯುತ್ತಿರುವ 11ನೇ ಭಾರತೀಯ ಅಥವಾ ಭಾರತೀಯ ಮೂಲದ ವಿದ್ಯಾರ್ಥಿಯ ಸಾವಾಗಿದ್ದು, ಅಮೆರಿಕದಲ್ಲಿರುವ ಭಾರತೀಯ ಸಮುದಾಯ ಆತಂಕಗೊಂಡಿದೆ.

ಕೆನಡಾದ ದಕ್ಷಿಣ ವ್ಯಾಂಕೋವರ್‌ನಲ್ಲಿ ಭಾರತದ 24 ವರ್ಷದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೃತನನ್ನು 24 ವರ್ಷದ ಚಿರಾಗ್ ಆಂಟಿಲ್ ಎಂದು ಗುರುತಿಸಲಾಗಿದೆ. ಗುಂಡಿದ ದಾಳಿಯಿಂದ ಚಿರಾಗ್​ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾರೆ.

ಏಪ್ರಿಲ್ 12 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನೆರೆಹೊರೆಯ ನಿವಾಸಿಗಳು ಗುಂಡಿನ ಶಬ್ದವನ್ನು ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದುವರೆಗೆ ಯಾರನ್ನೂ ಬಂಧಿಸಿಲ್ಲ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net