

ನವದೆಹಲಿ: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಮುಂಬರುವ ಕೆಲವು ಪಂದ್ಯಗಳಿಗೆ ತಂಡದ ನಾಯಕ ಶಿಖರ್ ಧವನ್ ಅಲಭ್ಯರಾಗಲಿದ್ದಾರೆ. ಇದು ಪಂಜಾಬ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆಯಿದೆ.
ಭುಜದ ನೋವಿನಿಂದ ಬಳಲುತ್ತಿರುವ ಶಿಖರ್ ಧವನ್ ಅವರು ಶನಿವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಶಿಖರ್ ಬದಲಿಗೆ ಸ್ಯಾಮ್ ಕರಣ್ ಅವರು ತಂಡವನ್ನು ಮುನ್ನಡೆಸಿದ್ದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ನಿರ್ದೇಶಕ ಸಂಜಯ್ ಬಂಗಾರ್ ಮಾತನಾಡಿ, ಶಿಖರ್ ಧವನ್ ಅವರು ಭುಜದ ನೋವಿನಿಂದ ಬಳಲುತ್ತಿದ್ದು ಅವರು ಕನಿಷ್ಠ 7 ರಿಂದ 10 ದಿನಗಳ ಕಾಲ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಂಡದ ಒಬ್ಬ ಅನುಭವಿ ಆರಂಭಿಕರ ಆಟಗಾರ ಶಿಖರ್ ಧವನ್ ನಂತಹವರು ಅಂತಹ ವಿಕೆಟ್‌ಗಳಲ್ಲಿ ಆಡಿದ ಅನುಭವ ಹೊಂದಿರುವವರು ತಂಡಕ್ಕೆ ಅತ್ಯಂತ ನಿರ್ಣಾಯಕರಾಗುತ್ತಾರೆ ಎಂದಿದ್ದಾರೆ.
ಶಿಖರ್ ಧವನ್ ಅವರು ಚಿಕಿತ್ಸೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಿದೆ. ಈ ವೇಳೆ ಅವರು ಕೆಲ ದಿನಗಳು ತಂಡದಿಂದ ಹೊರಗುಳಿಯಬಹುದು ಎಂದು ತೋರುತ್ತಿದೆ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬಂಗಾರ್ ಹೇಳಿದರು.
ಶನಿವಾರ ನಡೆದ ರಾಜಸ್ಥಾನ ರಾಯಲ್ಸ್ ಧವನ್ ಆಡಿದಿರುವುದು ನಮಗೆ ಸ್ವಲ್ಪ ಹಿನ್ನಡೆಯಾಯಿತು ಒಂದು ಲೆಕ್ಕದಲ್ಲಿ ಸೋಲಿಗೆ ಇದು ಒಂದು ಕಾರಣವಾಗಬಹುದು ಎಂದು ತಂಡದ ನಿರ್ದೇಶಕ ಬಂಗಾರ್ ಕಳವಳಕಾರಿ ಕಳವಳ ವ್ಯಕ್ತಪಡಿಸಿದರು.