ಗೌರಿ-ಗಣೇಶ ಹಬ್ಬದ ವಾರದಲ್ಲಿ 24 ಸಿನಿಮಾ ಒಟಿಟಿಗೆ! ಯಾವೆಲ್ಲ ಚಿತ್ರಗಳು ರಿಲೀಸ್​? | OTT Films

ವಿಜಯವಾಣಿ (16)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ಈ ವಾರ ಗೌರಿ-ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದೆ. ಇದೇ ಸಮಯಕ್ಕೆ ಹಲವು ಭಾಷೆಯ ಸಿನಿಮಾಗಳು ಮತ್ತು ವೆಬ್​ ಸರಣಿಗಳು ಇದೀಗ ಒಟಿಟಿಗೆ ಲಗ್ಗೆಯಿಟ್ಟಿವೆ. ಹಬ್ಬದ ವಾರದಂದು ಬರೋಬ್ಬರಿ 27 ಸಿನಿಮಾಗಳು ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗಿವೆ. ಹಾಗಿದ್ದರೆ, ಯಾವ ನಟರ ಸಿನಿಮಾಗಳು ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಒಮ್ಮೆ ಕಣ್ಣಾಡಿಸಿ.

ಈ ವಾರ ತೆರೆಕಂಡ ಚಿತ್ರಗಳಿವು (ಆ.25-31)

ನೆಟ್‌ಫ್ಲಿಕ್ಸ್

1. ಆಗಸ್ಟ್ 26: ಅಬಿಗೈಲ್ (ತೆಲುಗು ಡಬ್​)

2. ಆಗಸ್ಟ್ 27: ಮೈ ಲೈಫ್ ವಿತ್ ದಿ ವಾಲ್ಟರ್ ಬಾಯ್ಸ್ ಸೀಸನ್ 2 (ಇಂಗ್ಲಿಷ್ ಸಿರೀಸ್​)

3. ಆಗಸ್ಟ್ 27: ಕತ್ರಿನಾ: ಕಮ್ ಹೆಲ್ ಅಂಡ್ ಹೈ ವಾಟರ್ (ಇಂಗ್ಲಿಷ್ ಸಿರೀಸ್​)

4. ಆಗಸ್ಟ್ 28: ದಿ ಥರ್ಸ್‌ಡೇ ಮರ್ಡರ್ ಕ್ಲಬ್ (ಇಂಗ್ಲಿಷ್)

5. ಆಗಸ್ಟ್ 29: ಮೆಟ್ರೋ ಇನ್.. ಡಿನೋ (ಹಿಂದಿ)

6. ಆಗಸ್ಟ್ 29: ಟು ಗ್ರೇವ್ಸ್ (ಸ್ಪ್ಯಾನಿಷ್ ಸಿರೀಸ್​)

7. ಆಗಸ್ಟ್ 29: ಅನೋನ್​​ ನಂಬರ್​ (ಇಂಗ್ಲಿಷ್)

8. ಆಗಸ್ಟ್ 30: ದಿ ಕರಾಟೆ ಕಿಡ್: ಲೆಜೆಂಡ್ಸ್ (ಇಂಗ್ಲಿಷ್)

ಅಮೆಜಾನ್ ಪ್ರೈಮ್

9. ಆಗಸ್ಟ್ 29: ಸಾಂಗ್ಸ್ ಆಫ್ ಪ್ಯಾರಡೈಸ್ (ಹಿಂದಿ)

ಜಿಯೋ ಹಾಟ್‌ಸ್ಟಾರ್

10. ಆಗಸ್ಟ್ 25: ಮಾಲ್ಡಿಟೋಸ್ (ಫ್ರೆಂಚ್ ಸಿರೀಸ್​)

11. ಆಗಸ್ಟ್ 27: ಥಂಡರ್‌ಬೋಲ್ಟ್ಸ್ (ಇಂಗ್ಲಿಷ್)

12. ಆಗಸ್ಟ್ 28: ಡೇ ಆಫ್​ ರೆಕನಿಂಗ್ (ಇಂಗ್ಲಿಷ್)

13. ಆಗಸ್ಟ್ 28: ಮೈ ಡೆಡ್ ಫ್ರೆಂಡ್ ಜೋ (ಇಂಗ್ಲಿಷ್)

14. ಆಗಸ್ಟ್ 29: ಹೌ ಐ ಲೆಫ್ಟ್ ದಿ ಓಪಸ್ ಡೀ (ಇಂಗ್ಲಿಷ್ ಸಿರೀಸ್​)

15. ಆಗಸ್ಟ್ 29: ರಾಂಬೊ ಇನ್ ಲವ್ (ತೆಲುಗು ಸಿರೀಸ್)

ಸನ್ ನೆಕ್ಸ್ಟ್

16. ಆಗಸ್ಟ್ 27: ಮಾಯಾಕುತು (ತಮಿಳು)

17. ಆಗಸ್ಟ್ 27: ಗೇವಿ (ತಮಿಳು)

ಜೀ5

18. ಆಗಸ್ಟ್ 29: ಶೋಧಾ (ಕನ್ನಡ ಸಿರೀಸ್​)

ಸೋನಿ ಲೈವ್​

19. ಆಗಸ್ಟ್ 29: ಸಂಭವ ವರ್ವಗಂ ನಳರಸಂಘಂ (ಮಲಯಾಳಂ ಸಿರೀಸ್)

ಲಯನ್ಸ್ ಗೇಟ್ ಪ್ಲೇ

20. ಆಗಸ್ಟ್ 29: ಬೆಟರ್ ಮ್ಯಾನ್ (ಇಂಗ್ಲಿಷ್)

21. ಆಗಸ್ಟ್ 29: ಎರೋಟಿಕ್ ಸ್ಟೋರೀಸ್ (ಇಂಗ್ಲಿಷ್)

ಆಪಲ್ ಪ್ಲಸ್ ಟಿವಿ

22. ಆಗಸ್ಟ್ 29: ಕ್ರಾಪ್ಡ್ (ಇಂಗ್ಲಿಷ್ ಸಿರೀಸ್​)

23. ಆಗಸ್ಟ್ 29: ಶೇರ್ ಐಲ್ಯಾಂಡ್ ಸೀಸನ್ 2 (ಇಂಗ್ಲಿಷ್ ಸಿರೀಸ್​)

ಎಂಎಕ್ಸ್​ ಪ್ಲೇಯರ್

24. ಆಗಸ್ಟ್ 27: ಹಾಫ್ ಸಿಎ ಸೀಸನ್ 2 (ಹಿಂದಿ ಸಿರೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net