

ಹೈದರಾಬಾದ್: ಇತ್ತೀಚಿನ ವರ್ಷಗಲ್ಲಿ ಮೊಬೈಲ್ ಫೋನ್ಗಳು ರಿಯಾಲಿಟಿ ಆಗಿದ್ದು, ಅನಿವಾರ್ಯವೂ ಆಗಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಹೆಚ್ಚು ಅಪಾಯವನ್ನು ಹೊಂದಿದ್ದು, ಜನರು ಅದನ್ನು ನಿರ್ಲಕ್ಷಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ವೈರ್ (Charger Wire) ಮುಟ್ಟಿದ ಪರಿಣಾಮ ಯುವಕನೋರ್ವ ಕರೆಂಟ್ ಹೊಡೆದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಅಕ್ಟೋಬರ್ 25ರಂದು ಈ ಘಟನೆ ನಡೆದಿದ್ದು, ಮೃತರನ್ನು ಮಾಲೋತ್ ಅನಿಲ್ (23) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಾಲೋತ್ ಅನಿಲ್ ರಾತ್ರಿ ತಮ್ಮ ಬೆಡ್ ಪಕ್ಕದಲ್ಲಿ ಫೋನ್ ಚಾರ್ಜ್ ಹಾಕಿ ಮಲಗಿದ್ದಾರೆ. ಒಂದು ಹೊತ್ತಿನಲ್ಲಿ ಅಚಾನಕ್ಕಾಗಿ ಚಾರ್ಜರ್ ವೈರ್ (Charger Wire) ಮುಟ್ಟಿದ ಕರೆಂಟ್ ಹೊಡೆದಿದೆ. ಕೂಡಲೇ ಅನಿಲ್ ಕಿರುಚಿಕೊಂಡಿದ್ದು, ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.