ಒಂದಲ್ಲ, ಎರಡಲ್ಲ ಒಟ್ಟು 23 ಸಿನಿಮಾಗಳು ಒಟಿಟಿಗೆ ಎಂಟ್ರಿ! ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಚಿತ್ರವಿದೆಯಾ ನೋಡಿ... | OTT Films

ಒಟಿಟಿ ಸಿನಿಮಾಗಳು
ಒಟಿಟಿ ಸಿನಿಮಾಗಳು
Published on
ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (OTT Films) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್​ ಹಿಟ್​ ಆಗಿದ್ದರೆ, ಸಾಕಷ್ಟು ಚಿತ್ರಗಳು ಫ್ಲಾಪ್​ ಸಾಲಿಗೆ ಸೇರಿರುತ್ತವೆ. ಥಿಯೇಟರ್​ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 23 ಸಿನಿಮಾ, ವೆಬ್​ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ. 

ನೆಟ್‌ಫ್ಲಿಕ್ಸ್

1. ಫೆ.11: ಅನಗನಾಗ ಓಕೆ ರಾಜು (ತೆಲುಗು)
2. ಫೆ.11: ಹ್ರಾ ಸೀಸನ್ 2 (ತೆಲುಗು)
3. ಫೆ.11: ಲವ್ ಈಸ್ ಬ್ಲೈಂಡ್ ಸೀಸನ್ 10 (ಇಂಗ್ಲಿಷ್)
4. ಫೆ.12: ತಲೈವರ್ ತಂಬಿ ತಲೈಮೈಲ್ (ತಮಿಳು)
5. ಫೆ.12: ಹೌ ಟು ಗೆಟ್​ ಟು ಬೆಲ್​ಫಾಸ್ಟ್​ ಫ್ರಂ ಹೆವನ್​ (ಇಂಗ್ಲಿಷ್)
6. ಫೆ.13: ದಿ ಆರ್ಟ್ ಆಫ್ ಸಾರಾ (ಸೌತ್​ ಕೊರಿಯನ್ ಸರಣಿ)
7. ಫೆ.14: ಬ್ಲೂ ಮೂನ್ (ಇಂಗ್ಲಿಷ್)
8. ಫೆ.13: ಟೈಲರ್ ಪೆರ್ರಿಸ್​ ಜೋ ಕಾಲೇಜ್ ರೋಡ್ ಟ್ರಿಪ್ (ಇಂಗ್ಲಿಷ್​)

ಪ್ರೈಮ್ ವಿಡಿಯೋ

9. ಫೆ.11: ಕ್ರಾಸ್ ಸೀಸನ್ 2 (ತೆಲುಗು)
10. ಫೆ.12: ಇಕ್ಕಿಸ್ (ಹಿಂದಿ)
11. ಫೆ.13: ಬ್ಯಾಂಡ್‌ವಾಲೆ (ಹಿಂದಿ)
12. ಲವ್ ಮಿ ಲವ್ ಮಿ (ಇಂಗ್ಲಿಷ್)

ಜಿಯೋ ಹಾಟ್‌ಸ್ಟಾರ್

13. ಫೆ.09: ದಿ ಬರ್ಬ್ಸ್ (ಇಂಗ್ಲಿಷ್)
14. ಫೆ.12: ಪ್ರಿಡೇಟರ್: ಬ್ಯಾಡ್‌ಲ್ಯಾಂಡ್ಸ್ (ತೆಲುಗು) 
15. ಫೆ.13: ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್ (ತೆಲುಗು) 

ಜೀ5

16. ಫೆ.11: ಮನ ಶಂಕರ ವರಪ್ರಸಾದ್ ಗರು (ತೆಲುಗು) 
17. ಫೆ.13: ಉತ್ತರ್​ (ಮರಾಠಿ) 
18. ಫೆ.13: ಭಾನುಪ್ರಿಯಾ ಭೂತರ್ ಹೋಟೆಲ್ (ಬಂಗಾಳಿ) 
19. ಫೆ.13: ಪತಿರಾತ್ರಿ (ಮಲಯಾಳಂ) 

ಸನ್​ ನೆಕ್ಸ್ಟ್​​

20. ಫೆ.13: ಸೂರ್ಯ- ದಿ ಪವರ್​ ಆಫ್​ ಲವ್​ (ಕನ್ನಡ) 
21. ಫೆ.13: ಮಾಯಾಬಿಮ್ (ತಮಿಳು) 

ಸೋನಿ ಲೈವ್​

22. ಫೆ.12: ಬೇಬಿ ಗರ್ಲ್​ (ತೆಲುಗು) 
23. ಫೆ.15: ರೆಡ್ ಐ ಸೀಸನ್ 2 (ವೆಬ್ ಸೀರೀಸ್) 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net