ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ: ಸಾವಿಗೆ ಶರಣಾದ ವೈದ್ಯಕೀಯ ಶಿಕ್ಷಣ ಆಕಾಂಕ್ಷಿ

end his life
Published on

ಕೋಟಾ: ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯೊಬ್ಬ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(NEET) ಕಡಿಮೆ ಅಂಕ ಗಳಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಕೋಟಾದಲ್ಲಿ ನಡೆದಿದೆ.

ರೋಷನ್(21) ಮೂಲತಃ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಇತ್ತೀಚಿಗೆ ಪ್ರಕಟವಾದ ನೀಟ್ ಪರೀಕ್ಷಾ​ ಫಲಿತಾಂಶದಲ್ಲಿ ಕಡಿಮೆ ಅಂಕ ಗಳಿಸಿದ್ದ. ಆತನ ಸಹೋದರ ಸುಮನ್ ಕೂಡ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮಾದರಿಯಲ್ಲೇ ಸಿಎಂ ಸಿದ್ದರಾಮಯ್ಯಗೂ ಸೆಂಗೋಲ್ ಪ್ರದಾನ; ರಾಜದಂಡದ ಮೇಲೆ ಪೆರಿಯಾರ್ ಭಾವಚಿತ್ರ…

ರೋಷನ್ ದೆಹಲಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿ ಗುರುವಾರ ಬೆಳಿಗ್ಗೆ ಕೋಟಾಗೆ ವಾಪಾಸ್ಸಾಗಿದ್ದ. ಆದರೆ ಶನಿವಾರ ಆತನ ಪೋಷಕರು ಕರೆ ಮಾಡಿದಾಗ, ರೋಷನ್ ಪ್ರತಿಕ್ರಿಯಿ ನೀಡಿರಲಿಲ್ಲ. ಆಗ ಸುಮನ್​ಗೆ ರೋಷನ್ ಪಿಜಿಗೆ ಹೋಗಿ ಪರೀಕ್ಷಿಸಲು ತಂದೆತಾಯಿ ಹೇಳಿದ್ದರು.

ಸುಮನ್​ ರೋಷನ್​ನನ್ನು ನೋಡಲು ಹೋದಾಗ ಆತ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ತನ್ನ ಸಹೋದರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಕೂಡಲೇ ಪೊಲೀಸರಿಗ ಮಾಹಿತಿ ತಲುಪಿಸಿದ್ದಾನೆ. ಇನ್ನು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net