

ಬೆಂಗಳೂರು: ನೂತನ ರಾಜಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸೆಂಗೋಲ್ಅನ್ನು ಸ್ಥಳಾಂತರಿಸಿದ್ದು ಭಾರಿ ಸುದ್ದಿಯನ್ನು ಮಾಡಿತ್ತು. ಇದರ ಬಗ್ಗೆ ಕೆಲ ವಿಪಕ್ಷಗಳಿಂದ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸೆಂಗೋಲ್ ಅನ್ನು ಸ್ವೀಕರಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಇಂದು ಸಾಮಾಜಿಕ ನ್ಯಾಯದ ಹಾಗೂ ಸೆಕ್ಯುಲರ್ ಸೆಂಗೋಲ್ಅನ್ನು ತಮಿಳುನಾಡು ಮೂಲದ ಸಂಘಟನೆಯೊಂದು ಪ್ರದಾನ ಮಾಡಲಿದೆ. ಇಂದು ಸಂಜೆ ಸೆಕ್ಯೂಲರ್ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಅಂದ ಹಾಗೆ ಈ ಸೆಕ್ಯೂಲರ್ ಸೆಂಗೋಲ್ಅನ್ನು ನೀಡುತ್ತಿರುವುದು ತಮಿಳುನಾಡಿನ ಪೇರವೈ ಸಂಘಟನೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 6 ಗಂಟೆಗೆ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಅದರ ಮೇಲೆ ಪೆರಿಯಾರ್ ಭಾವಚಿತ್ರ ಇರಲಿದೆ.