ಪ್ರೀತಿಸಿದವಳ ಕೈಹಿಡಿಯಲು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

narasingpur
Published on

ನರಸಿಂಗ್‌ಪುರ: ಮುಸ್ಲಿಂ ಯುವಕನೊಬ್ಬ ಪ್ರೀತಿಸಿದವಳ ಕೈಹಿಡಿಯಲು ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್​ಪುರ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ನಿಮ್ಮ ಕೊಡುಗೆ ಅಪಾರ: ಬಿ.ಎಲ್​. ಸಂತೋಷ್​ ಕಾಲೆಳೆದ ಎಂ.ಬಿ. ಪಾಟೀಲ್​

ಮೂಲತಃ ನರಸಿಂಗ್​​ಪುರ ನಿವಾಸಿಯಾಗಿರುವ ಫಾಜಿಲ್​ ಖಾನ್ ತನ್ನ ಗೆಳತಿ ಸೋನಾಲಿಯನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆತ ಆಕೆಯನ್ನು ವಿವಾಹವಾಗಲು ಬಯಸಿ ಗುರುವಾರದಂದು ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರನ್ನು ಅಮನ್​ ರೈ ಎಂದು ಬದಲಿಸಿಕೊಂಡಿದ್ದಾನೆ. ​ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್​ ರೈ ವಿವಾಹವು ನೆರವೇರಿದ್ದು, ಮದುವೆಗೆ ಎರಡು ಮನೆಯವರು ಸಾಕ್ಷಿಯಾಗಿದ್ದಾರೆ.

ಅಲ್ಲದೇ, ಈಗಾಗಲೇ ವಿವಾಹ ನೋಂದಣಿಗಾಗಿ ಈ ದಂಪತಿಗಳು ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅಮನ್​ ತಂದೆ ಮೊದಲು ಹಿಂದೂವಾಗಿದ್ದರು. ಆದರೆ ಅವನ ತಾಯಿ ಮುಸ್ಲಿಂ ಆಗಿದ್ದಳು. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊಡೆದು ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದರು.

ಇದನ್ನೂ ಓದಿ: ಲಂಚ ಆರೋಪ ಹಿನ್ನಲೆ, ಸಿಬ್ಬಂದಿಯಿಂದ ಮರಣೋತ್ತರ ಪರೀಕ್ಷೆ ನಡೆಸದೆ ಪ್ರತಿಭಟನೆ!

ಈ ಬಗ್ಗೆ ಮಾತನಾಡಿದ ಅಮನ್​, ನನ್ನ ತಂದೆ ನನ್ನ ತಾಯಿಗಾಗಿ ಧರ್ಮವನ್ನು ಬದಲಾಯಿಸಿದ್ದರು. ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಮುಗುಳ್ನಕ್ಕು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net