'ಅಶೋಕ್​ ಗಲ್ಲಾ 2' ಚಿತ್ರಕ್ಕೆ 2020ರ ಮಿಸ್​ ಇಂಡಿಯಾ ನಾಯಕಿ!

Untitled design - 2023-08-31T161405.137
Published on

ಆಂಧ್ರಪ್ರದೇಶ: 'ಹೀರೋ' ಚಿತ್ರದ ಮುಖೇನ ಟಾಲಿವುಡ್​ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಸೂಪರ್‌ಸ್ಟಾರ್ ಕೃಷ್ಣ ಅವರ ಮೊಮ್ಮಗ, ಪ್ರಿನ್ಸ್ ಮಹೇಶ್ ಬಾಬು ಅವರ ಸೋದರಳಿಯ ನಟ ಅಶೋಕ್ ಗಲ್ಲಾ ಅಭಿನಯದ 'ಅಶೋಕ್​ ಗಲ್ಲಾ 2' ಚಿತ್ರದ ಬಗ್ಗೆ ಇದೀಗ ಹೊಸ ಅಪ್ಡೇಟ್​ವೊಂದು ಲಭಿಸಿದೆ.

'ಹೀರೋ' ನಂತರ ತಮ್ಮ ಎರಡನೇ ಚಿತ್ರಕ್ಕೆ ಸಾಕಷ್ಟು ಕಸರತ್ತು ನಡೆಸುತ್ತಿರುವ ಅಶೋಕ್, 'ಅಶೋಕ್​ ಗಲ್ಲಾ 2' ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಲಿದ್ದಾರೆ ಎಂದು ಇತ್ತೀಚಿನ ವರದಿಗಳು ಉಲ್ಲೇಖಿಸಿವೆ. ಅರ್ಜುನ್ ಜಂಡ್ಯಾಲ ನಿರ್ದೇಶನದ ಈ ಚಿತ್ರಕ್ಕೆ 2020 ರಲ್ಲಿ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾದ ಮಾನಸ ವಾರಣಾಸಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಮಾನಸ ವಾರಣಾಸಿ ಅವರ ಫೋಟೋವನ್ನು ಪೋಸ್ಟ್​ ಮಾಡಿ ತಿಳಿಸಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ 'ಅಶೋಕ್ ಗಲ್ಲಾ 2' ಎಂದು ಶೀರ್ಷಿಕೆ ಇಡಲಾಗಿದೆ. ಅರ್ಜುನ್​ ಜತೆಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ, ಚಿತ್ರದಲ್ಲಿ ಸತ್ಯಭಾಮಾ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಚಿತ್ರಕ್ಕೆ ಭೀಮ್ ಸಿಸಿರೊಲಿಯೊ ಸಂಗೀತ ಸಂಯೋಜನೆ ಮಾಡಿದ್ದು, ಬಾಲಕೃಷ್ಣ, ಎನ್‌ಆರ್‌ಐ ಮತ್ತು ಚಲನಚಿತ್ರ ವಿತರಕರು ತಮ್ಮ ಚೊಚ್ಚಲ ನಿರ್ಮಾಣವಾಗಿ ಲಲಿತಾಂಬಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಅರ್ಜುನ್​ ಗಲ್ಲಾ 2 ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net