

ಜಾರ್ಖಂಡ್: ಹಾಸ್ಟೆಲ್‌ನ ಸುಮಾರು 200 ಮಹಿಳಾ ನಿವಾಸಿಗಳನ್ನು (Womens Locked) ಕೂಡಿ ಬೀಗ ಹಾಕಿದ ಓರ್ವ ವ್ಯಕ್ತಿ, ಕಟ್ಟಡದ ಬಾಗಿಲಿಗೆ ಬೀಗ ಜಡಿದು, ಮಹಿಳೆಯರು ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿಗೆ ದೂಡಿದ ಘಟನೆ ರಾಂಚಿಯ ಜಾರ್ಖಂಡ್ನಲ್ಲಿರುವ ತಾರ್ಪಖನಾ ಪ್ರದೇಶದ ಸರಸ್ವತಿ ಹಾಸ್ಟೆಲ್‌ನಲ್ಲಿ ವರದಿಯಾಗಿದೆ.
ಹಾಸ್ಟೆಲ್ ಜಾಗದ ವಿಚಾರಕ್ಕೆ ಕಟ್ಟಡದ ಮಾಲೀಕರು ಮತ್ತು ಜಮೀನು ಮಾರಿದ ವ್ಯಕ್ತಿಯ ಪತ್ನಿಯ ನಡುವೆ ಭಾರೀ ಜಟಾಪಟಿ ನಡೆಯುತ್ತಿತ್ತು. ಇವರಿಬ್ಬರ ನಡುವಿನ ಜಮೀನು ವಿವಾದ ದಿನದಿಂದ ದಿನಕ್ಕೆ ತೀವ್ರವಾಗಿದ್ದು, ಕೊಡಬೇಕಾದ ಹಣ ಕೊಡುತ್ತಿಲ್ಲ ಎಂದು ಆಕೆ ಪ್ರಬಲ ವ್ಯಕ್ತಿಯ ಸಹಾಯದಿಂದ ಮಹಿಳೆಯರಿದ್ದ ಹಾಸ್ಟೆಲ್‌ಗೆ ಬೀಗ ಹಾಕಿಸಿದ್ದಾಳೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಮಹಿಳಾ ನಿವಾಸಿಗಳು, ಒಂದೊತ್ತು ಊಟ ಮಾಡಲು ಪರದಾಡಿದ್ದಾರೆ.
ತಾರ್ಪಖನಾ ಪ್ರದೇಶದ ಸರಸ್ವತಿ ಹಾಸ್ಟೆಲ್‌ನ ಆಸ್ತಿಯ ಮಾಲೀಕತ್ವದ ವಿಚಾರಕ್ಕೆ ಈ ವಿವಾದ ಭುಗಿಲೆದ್ದಿದೆ. ಆರಂಭದಲ್ಲಿ ಹಾಸ್ಟೆಲ್ ಇರುವ ಭೂಮಿಯನ್ನು ಮೂಲತಃ ಕೋವಿಡ್ ರೋಗ ಕಾಣಿಸಿಕೊಂಡ ಸಮಯದಲ್ಲಿ ನಿಧನರಾದ ಅಜಯ್ ಕಚಾಪ್ ಅವರಿಂದ ಖರೀದಿಸಲಾಗಿತ್ತು ಎನ್ನಲಾಗಿದೆ. ಅಜಯ್ ಬದುಕಿದ್ದ ಸಮಯದಲ್ಲಿ ಈ ವಿಷಯಕ್ಕೆ ಸಂಬಂಧಿಸದಿಂತೆ ಯಾವುದೇ ಸಮಸ್ಯೆಗಳು ಆಗಿರಲಿಲ್ಲ. ಆದರೆ, ಆತನ ಮರಣದ ನಂತರ, ಅವರ ಪತ್ನಿ ಲಾಲಿ ಎಂಬ ಮಹಿಳೆ, ನಮಗೆ ಮೂಲ ಮಾರಾಟದ ಬೆಲೆ ದೊರತಿಲ್ಲ. ಹೀಗಾಗಿ ಇನ್ನೂ ಹೆಚ್ಚುವರಿ ಹಣ ಬರಬೇಕು ಕೊಡಿ ಎಂದು ಹಾಸ್ಟೆಲ್ ಮಾಲೀಕರಿಗೆ ಒತ್ತಾಯಿಸಿದ್ದಾಳೆ.
ತಾನು ಹಾಕಿದ ಬೇಡಿಕೆಗಳನ್ನು ಈಡೇರಿಸದ ಕಾರಣ ಲಾಲಿ ತನ್ನ ಸಹಚರರನ್ನು ಮುಂದೆ ಬಿಟ್ಟು ಪದೇ ಪದೇ ಹಾಸ್ಟೆಲ್‌ಗೆ ಬೀಗ ಹಾಕಿ, ಅಲ್ಲಿನ ಕೆಲಸಗಳಿಗೆ ತೊಡಕು ಮಾಡುತ್ತಿದ್ದಳು ಎಂದು ವರದಿಯಾಗಿದೆ. ಮತ್ತೆ ಹಣದ ವಿಚಾರ ಭುಗಿಲೆದ್ದ ಹಿನ್ನಲೆ ಈ ಬಾರಿ ಹಾಸ್ಟೆಲ್ನಲ್ಲಿದ್ದ 200 ಮಹಿಳೆಯರನ್ನು ಒಳಗೆ ಕೂಡಿ ಬೀಗ ಜಡಿಸಿದ್ದಾಳೆ. ಬಹಿರಂಗವಾಗಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳ ಬಗ್ಗೆ ನೆರೆಹೊರೆಯವರು ಕಳವಳ ವ್ಯಕ್ತಪಡಿಸಿದ್ದೇ ಆದರೂ ಸ್ಥಳೀಯ ಯಾವ ಅಧಿಕಾರಿಗಳು ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸಲು ತಲೆಹಾಕಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).