ರಾಜ್ಯಸಭೆ ಸದಸ್ಯರ ವೇತನಕ್ಕೆ 200 ಕೋಟಿ ರೂ. ಖರ್ಚು!

Rajyasabhe
Published on

ನವದೆಹಲಿ: ರಾಜ್ಯಸಭಾ ಸದಸ್ಯರ ವೇತನ, ಭತ್ಯೆಗಳು, ಇನ್ನಿತರ ಸವಲತ್ತುಗಳಿಗಾಗಿ ಕಳೆದ ಎರಡು ವರ್ಷದಿಂದ 200 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ಸರ್ಕಾರ ಉತ್ತರಿಸಿದೆ.

2021-22ರಲ್ಲಿ 28.50 ಕೋಟಿ ರೂ. ದೇಶದೊಳಗಿನ ಪ್ರವಾಸಕ್ಕೆ, 1.28 ಕೋಟಿ ರೂ. ಅಂತಾರಾಷ್ಟ್ರೀಯ ಸಂಚಾರಕ್ಕೆ, ವೇತನಕ್ಕೆ 57.60 ಕೋಟಿ ರೂ., ವೈದ್ಯಕೀಯ ವೆಚ್ಚಕ್ಕಾಗಿ 17 ಲಕ್ಷ ರೂ., ಕಚೇರಿ ನಿವರ್ಹಣಾ ವೆಚ್ಚ 7.50 ಕೋಟಿ ರೂ ಹಾಗೂ ಐಟಿ ಸಹಾಯಕ್ಕಾಗಿ 1.20 ಕೋಟಿ ರೂ. ವ್ಯಯವಾಗಿದೆ.

2022-23ರಲ್ಲಿ ದೇಶದೊಳಗಿನ ಪ್ರವಾಸಕ್ಕೆ 30.90 ಕೋಟಿ ರೂ.,ವಿದೇಶ ಪಯಣಕ್ಕೆ 2.60 ಕೋಟಿ ರೂ., ವೇತನ ಬಾಬ್ತಿಗೆ 58.50 ಕೋಟಿ ರೂ., ವೈದ್ಯಕೀಯ ಬಿಲ್ 65 ಲಕ್ಷ ರೂ., ಕಚೇರಿ ನಿರ್ವಗಣೆ 7 ಕೋಟಿ ರೂ., ಐಟಿ ಸೇವೆಗಾಗಿ 1.50 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮಧ್ಯಪ್ರದೇಶದ ಚಂದ್ರಶೇಖರ ಗೌರ್ ಅವರಿಗೆ ನೀಡಿರುವ ಮಾಹಿತಿಯಲ್ಲಿ ರಾಜ್ಯಸಭಾ ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net