20 ಕೆಜಿ ತೂಕದ ಅಪರೂಪದ 'ಕಚಿಡಿ' ಮೀನು ಸೆರೆಹಿಡಿದ ಮೀನುಗಾರ!; ಮಾರಾಟ ಮಾಡಿದ್ದು ಎಷ್ಟಕ್ಕೆ ಗೊತ್ತಾ?

Untitled design - 2023-08-09T205128.009
Published on

ಆಂಧ್ರಪ್ರದೇಶ: ಕಳೆದ ಹಲವು ತಿಂಗಳಿಂದ ದೇಶದ ನಾನಾ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿ-ಹೊಳೆಗಳು ಉಕ್ಕಿ ಹರಿಯುತ್ತಿದೆ. ಈ ನಡುವೆ ಭಾರೀ ಮಳೆಯಿಂದ ಮೀನುಗಾರರಿಗೆ ಹೆಚ್ಚು ಲಾಭ ದೊರಕಿದ್ದು, ಕಡಲ ತೀರದಲ್ಲಿ ಅನೇಕ ಮೀನುಗಾರರು ವಿವಿಧ ಬಗೆಯ ಮೀನು ಹಿಡಿದು ಲಾಭಗಳಿಸಿದ್ದಾರೆ.

ಅದೇ ರೀತಿ ಆಂಧ್ರಪ್ರದೇಶದ ಮೀನುಗಾರರೊಬ್ಬರು ಬರೋಬ್ಬರಿ 20 ಕೆಜಿ ತೂಕದ ಅಪರೂಪದ ಮೀನನ್ನು ಸೆರೆಹಿಡಿದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆಂಧ್ರಪ್ರದೇಶದ ಕೋನಸೀಮಾ ಎಂಬ ಪ್ರದೇಶದಲ್ಲಿ ವಾಸವಿರುವ ಮೀನುಗಾರರೊಬ್ಬರು ಎಂದಿನಂತೆ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದ ವೇಳೆ 20 ಕೆಜಿ ತೂಕದ ಅಪರೂಪದ ಕಚಿಡಿ ಮೀನನ್ನು ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಈ ಮೀನಿನಲ್ಲಿ ವಿವಿಧ ಔಷಧೀಯ ಗುಣಗಳಿದೆ ಎಂದು ಹೇಳಲಾಗಿದ್ದು, ಮೀನುಗಾರನಿಗೆ ಭಾರೀ ಅದೃಷ್ಟ ಒಲಿದು ಬಂದಿದೆ.

ಮೀನನ್ನು ಕಾಕಿನಾಡ ಮೀನು ಮಾರುಕಟ್ಟೆಯಲ್ಲಿ ತಂದು ಹರಾಜಿನಲ್ಲಿ ಕೂಗಿದ ಮೀನುಗಾರನಿಗೆ, ಬರೋಬ್ಬರಿ 3.3 ಲಕ್ಷ ರೂ. ಲಾಭ ದೊರಕಿದೆ. ವ್ಯಾಪಾರದಲ್ಲಿ ಗ್ರಾಹಕರು ಭಾರೀ ಪೈಪೋಟಿ ನೀಡಿದ್ದು, ಮೀನುಗಾರನಿಗೆ ಬಂಪರ್​ ಬೆಲೆಯನ್ನು ಕೊಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net