

ಆಂಧ್ರಪ್ರದೇಶ: ಎಂ.ಎಂ. ಕೀರವಾಣಿ ಅವರ ಪುತ್ರ ಸಿಂಹ ಕೊಡೂರಿ ಅಭಿನಯದ 'ಉಸ್ತಾದ್' ಚಿತ್ರ ಇದೀಗ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದು, ಆಗಸ್ಟ್ 12 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಟಾಲಿವುಡ್ ಚಿತ್ರದ ಪ್ರೀ-ರಿಲೀಸ್ ಈವೆಂಟ್ಗೆ ಇದೀಗ ಸ್ಟಾರ್ ಡೈರ್ಕ್ಟರ್ ಅತಿಥಿಯಾಗಿ ಆಗಮಿಸಲಿದ್ದಾರೆ.
'ಉಸ್ತಾದ್' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಚಿತ್ರದ ಆಡಿಯೋ ಲಾಂಚ್ ಅನ್ನು ಪ್ರೀ-ರಿಲೀಸ್ ಈವೆಂಟ್ನಲ್ಲಿ ಮಾಡಲು ಚಿತ್ರತಂಡ ಯೋಜಿಸಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಭಾಗವಹಿಸಲಿದ್ದು, ಈವೆಂಟ್ ಹೈದರಾಬಾದ್‌ನ ಜೆಆರ್‌ಸಿ ಗ್ರೌಂಡ್ಸ್ನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
'ಮಸೂದ' ಮತ್ತು 'ಬಳಗಂ' ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ಕಾವ್ಯಾ ಕಲ್ಯಾಣರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಜಿನಿಕಾಂತ್ ಅವರ ಜೈಲರ್, ಮೆಗಾಸ್ಟಾರ್ ನಟನೆಯ ಭೋಲಾ ಶಂಕರ್ ಚಿತ್ರಗಳು ಬಿಡುಗಡೆಗೊಳ್ಳುವ ವಾರದಲ್ಲೇ ಉಸ್ತಾದ್ ಕೂಡ ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಚಿತ್ರತಂಡ ನಿರೀಕ್ಷಿಸಿದೆ,(ಏಜೆನ್ಸೀಸ್).