ಕುತಂತ್ರಿ ಪಾಕ್​ ಕದನ ವಿರಾಮ ಉಲ್ಲಂಘನೆಯಿಂದ ಗಾಯಗೊಂಡಿದ್ದ ಯೋಧರಿಬ್ಬರು ಹುತಾತ್ಮ

Soldiers Killed
Published on

ಶ್ರೀನಗರ: ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಂಪುರ್​ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಕದಮ ವಿರಾಮ ಉಲ್ಲಂಘಿಸಿ ನಿರಂತರವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ಹುತಾತ್ಮರಾಗಿದ್ದಾರೆ. ಮತ್ತೊರ್ವ ಯೋಧ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಾಪಿ ಪಾಕ್​ ಸೇನೆ ಕದಮ ವಿರಾಮ ಉಲ್ಲಂಘಿಸಿದೆ. ಕರೊನಾ ಲಾಕ್​ಡೌನ್​ನಂತಹ ವಿಷಮ ಸ್ಥಿತಿಯಲ್ಲೂ ತನ್ನ ನರಿಬುದ್ಧಿ ಬಿಡದ ಪಾಕ್​ ಈಗಾಗಲೇ ಸಾಕಷ್ಟು ಬಾರಿ ಕದಮ ವಿರಾಮ ಉಲ್ಲಂಘನೆ ಮಾಡಿ ವಿಷ ಕಾರಿದೆ. ಇದಕ್ಕೆ ಭಾರತೀಯ ಸೇನೆಯು ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.

ಮೇ 1ರ ಬೆಳಗ್ಗೆ 3:30ರ ಸುಮಾರಿಗೆ ಬಾರಾಮುಲ್ಲಾ ಜಿಲ್ಲೆಯ ರಾಂಪುರ್​​ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿನ ನಡೆಸಿದೆ, ಇದಕ್ಕೆ ನಮ್ಮ ಸೇನೆ ಕೂಡ ತಕ್ಕ ಉತ್ತರ ನೀಡಿದೆ ಎಂದು ಭದ್ರತಾ ಪಡೆ ವಕ್ತಾರ ಕರ್ನಲ್​ ರಾಜೇಶ್​ ಕಲಿಯಾ ಹೇಳಿಕೆ ನೀಡಿದ್ದಾರೆ.

ಏಪ್ರಿಲ್​ 30ರಲ್ಲೂ ಸಹ ಪಾಕ್​ ಅಪ್ರಚೋದಿತ ಕದಮ ವಿರಾಮ ಉಲ್ಲಂಘನೆ ಮಾಡಿ, ಪೂಂಚ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಸಣ್ಣ ಆಯುಧಗಳಿಂದ ಫೈರಿಂಗ್​ ಮಾಡುತ್ತಿರುವುದಲ್ಲದೇ ಸಣ್ಣ ಪಿರಂಗಿಗಳಿಂದಲೂ ದಾಳಿ ಮಾಡುವ ಯತ್ನಕ್ಕೆ ಪಾಕ್​ ಕೈ ಹಾಕಿದೆ. ಮೊದಲೇ ಆರ್ಥಿಕವಾಗಿ ದಿವಾಳಿ ಆಗಿರುವ ಪಾಕ್​ಗೆ ಕರೊನಾ ಮತ್ತಷ್ಟು ಬಲವಾದ ಹೊಡೆತ ನೀಡಿದರೂ ಸಹ ತನ್ನ ಕುಂತಂತ್ರ ಬುದ್ಧಿಯನ್ನು ನಿಲ್ಲಿಸದಿರುವುದು ಆ ದೇಶ ದುರಾದೃಷ್ಟವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net