More

    ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಕೊಲ್ಲಂ(ಕೇರಳ): ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಕೊಲ್ಲಂ ಜಿಲ್ಲೆಯ 42 ವರ್ಷದ ಬ್ಯೂಟಿಷಿಯನ್​ ಮಹಿಳೆಯ ಶವ ಸುಟ್ಟ ಸ್ಥಿತಿಯಲ್ಲಿ ಪಲಕ್ಕಾಡ್​ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಕೊಲೆ ತಪ್ಪೊಪ್ಪಿಗೆ ಆಧಾರದ ಮೇಲೆ ಪಲಕ್ಕಾಡ್​ ಜಿಲ್ಲೆಯ ಸಂಗೀತ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬ್ಯೂಟಿಷಿಯನ್​ ಸುಚಿತ್ರಾ ಕೊಲ್ಲಂನ ಕೊಟ್ಟಿಯಾಂ ಬಳಿಯಿರುವ ಥ್ರಿಕ್ಕೊವಿಲ್ವಟ್ಟಂ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬ್ಯೂಟಿಷಿಯನ್​ ಆಗಿದ್ದ ಸುಚಿತ್ರಾ ಅವರ ಮೃತದೇಹ ಕಾಲುಗಳನ್ನು ಕತ್ತರಿಸಿ, ಅರ್ಧ ದೇಹ ಸುಟ್ಟು, ಹೂತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಕೊಚ್ಚಿಯಲ್ಲಿ ತರಬೇತಿ ಇದೆ ಎಂದು ಹೇಳಿ ಸುಚಿತ್ರಾ ಅವರು ಮಾರ್ಚ್​ 18ರಂದು ಮನೆಯಿಂದ ಹೊರಹೋದರು. ಅದಾದ ಎರಡು ದಿನಗಳಲ್ಲೇ (ಮಾರ್ಚ್​ 20) ಅವರ ಮೊಬೈಲ್​ ಫೋನ್​ ನಾಟ್​ ರೀಚಬಲ್ ಆಗಿತ್ತು. ಗಾಬರಿಗೊಂಡ ಅವರ ಕುಟುಂಬ ಮಾರ್ಚ್​ 22ರಂದು ಕೊಟ್ಟಿಯಂ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.​

    ಇದನ್ನೂ ಓದಿ: ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು

    ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ತಾಯಿಗೆ ಹುಷಾರಿಲ್ಲ 5 ದಿನ ರಜೆ ಬೇಕೆಂದು ಉದ್ಯೋಗದಾತರ ಬಳಿ ಸುಚಿತ್ರಾ ರಜೆ ಕೇಳಿ ಹೋಗಿದ್ದು ಗೊತ್ತಾಯಿತು. ಆದರೆ, ಮನೆಯಲ್ಲಿ ತರಬೇತಿ ಇದೆ ಎಂದು ಹೇಳಿದ್ದರು. ಅನುಮಾನಗೊಂಡ ಪೊಲೀಸರು ಅವರ ಕಾಲ್​ ಡೀಟೇಲ್ಸ್​ ಅನ್ನು ತೆಗೆದು ನೋಡಿದಾಗ ಸುಚಿತ್ರಾ ಪಲಕ್ಕಾಡ್​ ಸಂಗೀತ ಶಿಕ್ಷಕ ಪ್ರಶಾಂತ್​ರೊಂದಿಗೆ ಸಂಪರ್ಕವಿದ್ದಿದ್ದು ತಿಳಿದುಬಂತು. ಪ್ರಶಾಂತ್​ರೊಂದಿಗೆ ಸುಚಿತ್ರಾಗೆ ಸಂಬಂಧವಿತ್ತು ಎನ್ನಲಾಗಿದೆ.

    ತನಿಖೆಗಾಗಿ ಕೊಲ್ಲಂ ಪೊಲೀಸ್ ತಂಡ ಪಲಕ್ಕಾಡ್​ಗೆ ತೆರಳಿತು. ಈ ವೇಳೆ ತಾನೇ ಕೊಲೆ ಮಾಡಿದ್ದಾಗಿ ಪ್ರಶಾಂತ್​ ತಪ್ಪೊಪ್ಪಿಕೊಂಡಿದ್ದು, ಪೊಲೀಸರ ವಶದಲ್ಲಿದ್ದಾನೆ.

    ಸುಚಿತ್ರಾಳನ್ನು ತನ್ನ ಮನೆಗೆ ಕರೆತರಲು ತನ್ನ ಕುಟುಂಬವನ್ನು ಮಾರ್ಚ್​ 18ರಂದು ಪ್ರಶಾಂತ್​ ಹೊರಗೆ ಕಳುಹಿಸಿದ್ದ. ಮನೆಗೆ ಬಂದ ಸುಚಿತ್ರಾ ಮತ್ತು ಪ್ರಶಾಂತ್​ ನಡುವೆ ಗಲಾಟೆ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ. ಟೇಬಲ್​ ಲ್ಯಾಂಪ್​ನ ಕೇಬಲ್​ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹದ ಎರಡು ಕಾಲುಗಳನ್ನು ಚಾಕುವಿನಿಂದ ಕೊಯ್ದು, ಸುಡಲು ಯತ್ನಿಸಿ ಕೊನೆಗೆ ಹಾಗೇ ಹೂತಿದ್ದಾನೆ.

    ಇದನ್ನೂ ಓದಿ: ಅಣ್ಣನನ್ನು ಬಾವಿಗೆ ಎಸೆದು ತಂಗಿಯನ್ನು ಹೊತ್ತೊಯ್ದ ಕಾಮುಕರು: ಮೂವರು ಅಪ್ರಾಪ್ತರು ಸೇರಿ 7 ಮಂದಿಯಿಂದ ದುಷ್ಕೃತ್ಯ

    ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ಪ್ರಶಾಂತ್​ ಹೇಳಿದಂತೆ ಪಲಕ್ಕಾಡ್​ನ ರಾಮನಾಥಪುರಂ ಬಳಿಯಿರುವ ಆತನ ಬಾಡಿಗೆ ಮನೆಯ ಆವರಣವನ್ನು ಹುಡುಕಾಡಿದಾಗ ಪೊಲೀಸರಿಗೆ ಸುಚಿತ್ರಾ ಮೃತದೇಹ ಪತ್ತೆಯಾಗಿದೆ. ಆಕೆ ಶವವನ್ನು ಪರೀಕ್ಷೆಗಾಗಿ ಪಲಕ್ಕಾಡ್​ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಶಾಂತ್​ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಆಲ್ಕೋಹಾಲ್​ನಿಂದ ಕೈಯಲ್ಲಿರುವ ವೈರಸ್​ ಹೋಗೋದಾದರೆ, ಗಂಟಲಲ್ಲಿ ಇರುವ ವೈರಸ್ಸೂ ಹೋಗತ್ತೆ ಬಿಡಿ, ಮದ್ಯದ ಅಂಗಡಿ ತೆರೀರಿ ಎಂದು ಸಲಹೆ ಇತ್ತ ಕಾಂಗ್ರೆಸ್​ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts