ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು

calf
Published on

ವಿಜಯನಗರ: ಇತ್ತೀಚೆಗಷ್ಟೆ ಧಾರವಾಡ ಜಿಲ್ಲೆಯಲ್ಲಿ ಮೂರು ಕಾಲಿನ ಕರು ಜನಿಸಿತ್ತು. ಇಂದು ಎರಡು ಕಾಲಿನ ಕರು ಜನನವಾಗಿರುವ ಘಟನೆ ಗುಡೇಕೋಟೆಯಲ್ಲಿ ನಡದಿದೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಎರಡು ಕಾಲಿನ ಕರು ಜನನವಾಗಿದ್ದು, 2 ಕಾಲು ಹೊಂದಿರುವ ಹಸುವಿನ ಕರು ನೋಡಲು ಜನ ಮುಗಿಬಿದ್ದಿದ್ದಾರೆ.

calf

ರೈತ ಪುಂಡಿ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸು ಇದಾಗಿದೆ. ಎರಡು ಕಾಲಿನ ಕರು ಜನ್ಮ ನೀಡಿದೆ. ಎರಡು ಕಾಲಿನ ಕರು ಕಂಡು ಗ್ರಾಮಸ್ಥರಿಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಇದೆ. ಮುಂದಿನ ಮತ್ತೇರಡು ಕಾಲುಗಳು ಇಲ್ಲ.

calf

ಇತ್ತೀಚೆಗಷ್ಟೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ, ಬಸನಗೌಡ ದೇಸಾಯಿ ಎಂಬುವವರಿಗೆ ಸೇರಿದ ಹಸು ಮೂರು ಕಾಲಿನ ಕರುಗೆ ಜನ್ಮ ನೀಡಿತ್ತು. ಮೂರು ಕಾಲಿನ ಕರುವಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದವು. ಕಿಲಾರಿ ಹಸುವಿಗೆ ಮೂರು ಕಾಲಿನ ಕರು ಜನಿಸಿದೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಪೂರ್ಣವಾಗಿದೆ. ಮುಂಭಾಗದಲ್ಲಿ ಅರ್ಧ ಮಾತ್ರ ಇರುವ ಎಡಗಾಲು ಇದೆ. ಮುಂಭಾಗದ ಬಲಗಾಲೇ ಇಲ್ಲದೇ ಕರು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net