ಮೂರು ಕಾಲಿನ ಕರು ಜನನ! ಏನಿದು ಅಚ್ಚರಿ?

Dharwad  
Published on

ಧಾರವಾಡ: ಜಿಲ್ಲೆಯಲ್ಲಿ ಮೂರು ಕಾಲಿನ ಕರು ಜನನವಾಗಿದೆ. ಕರುವಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಕರು ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ, ಬಸನಗೌಡ ದೇಸಾಯಿ ಎಂಬುವವರಿಗೆ ಸೇರಿದ ಹಸುವಿನ ಕರು ಮೂರು ಕಾಲಿನೊಂದಿಗೆ ಜನಿಸಿದೆ.

ಇತ್ತೀಚೆಗೆ ಯರಗಟ್ಟಿ ಪೇಟೆಯಲ್ಲಿ ಕಿಲಾರಿ ಹಸುವನ್ನು ಖರೀದಿಸಲಾಗಿತ್ತು. ಈ ಕಿಲಾರಿ ಹಸುವಿಗೆ ಮೂರು ಕಾಲಿನ ಕರು ಜನಿಸಿದೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಪೂರ್ಣವಾಗಿದೆ. ಮುಂಭಾಗದಲ್ಲಿ ಅರ್ಧ ಮಾತ್ರ ಇರುವ ಎಡಗಾಲು ಇದೆ. ಮುಂಭಾಗದ ಬಲಗಾಲೇ ಇಲ್ಲದೇ ಕರು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net