ನಡೆದೇ ಹೋಯ್ತು ದುರಂತ; ಪಟಾಕಿ ಅಂಗಡಿ ಸುಟ್ಟು ಇಬ್ಬರ ಸಾವು

41564
ಸಾಂದರ್ಭಿಕ ಚಿತ್ರ
Published on

ವಿಜಯವಾಡ: ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಒಟ್ಟು 19 ಅಂಗಡಿಗಳಿದ್ದು, ಅವುಗಳಲ್ಲಿ 3 ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.

ಈ ಘಟನೆ ಇಂದು ಬೆಳಗ್ಗೆ (ಅ.23) ವಿಜಯವಾಡದ ಗಾಂಧಿನಗರದ ಜಿಮ್ಖಾನ ಮೈದಾನದಲ್ಲಿ ಸಂಭವಿಸಿದೆ. ಮಾರಾಟಕ್ಕೆಂದು ಅಂಗಡಿಗೆ ವ್ಯಾನ್ ಮೂಲಕ ಪಟಾಕಿ ಬಂದಿದೆ. ಈ ವೇಳೆ ಪಟಾಕಿಯನ್ನು ಇಳಿಸುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟಾಕಿ ಅಂಗಡಿ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಕಿಯ ತೀವ್ರತೆಗೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಧಿಕ ಪ್ರಮಾಣದ ಪಟಾಕಿಗಳು ಸಿಡಿಯುತ್ತಿರುವ ಶಬ್ದ ಕೇಳಿಸುತ್ತಿದೆ.

ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಮೃತರು ವಿಜಯವಾಡ ಮೂಲದ ಕಾಸಿ ಮತ್ತು ಪಿಡುಗುರಳ್ಳ ಪಟ್ಟಣದ ಸಾಂಬಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದ, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಉಳಿದ ಅಂಗಡಿಗಳಿಗೆ ಬೆಂಕಿ ಪಸರಿಸಲು ಸಾಧ್ಯವಾಗಿಲ್ಲ.

ದೀಪಾವಳಿ ಹಿನ್ನಲೆ ಪಟಾಕಿ ವ್ಯಾಪಾರ ಜೋರಾಗಿದೆ. ಹೀಗಾಗಿ ನಾವು ರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿರುವ ಅಂಗಡಿಗಳಿಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡಿದ್ದೇವೆ. ಆದರೂ ಈ ಘಟನೆ ಸಂಭವಿಸಿದೆ ಎಂದು ವಿಜಯವಾಡ ಪೊಲೀಸ್ ಕಮಿಷನರ್ ಕಾಂತಿ ರಾಣಾ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net