ಆನ್​ಲೈನ್​ನಿಂದ ಬಂದ ಪಾರ್ಸೆಲ್​ ತೆರೆಯುತ್ತಿದ್ದಂತೆ ಬ್ಲಾಸ್ಟ್​! ತಂದೆ-ಮಗಳು ಸ್ಥಳದಲ್ಲೇ ಸಾವು

WhatsApp Image 2024-05-03 at 1.38.53 PM
Published on

ಗುಜರಾತ್: ಆನ್​ಲೈನ್​ನಲ್ಲಿ ಆರ್ಡರ್​ ಮಾಡಲಾದ ವಸ್ತುವಿನ ಡೆಲಿವರಿಯನ್ನು ಸ್ವೀಕರಿಸಿದ ತಂದೆ-ಮಗಳು, ಅದರೊಳಗೆ ಏನಿದೆ ಎಂದು ಪರಿಶೀಲಿಸಲು ಬಾಕ್ಸ್​ ಓಪನ್ ಮಾಡಿದಾಗ ಒಳಗಿದ್ದ ಐಟಂ ದಿಢೀರ್​ ಸ್ಪೋಟಗೊಂಡಿದೆ. ಬ್ಲಾಸ್ಟ್​​ ತೀವ್ರತೆಗೆ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಗುಜರಾತ್​ನ ಸಬರ್​​ಕಾಂತ ಜಿಲ್ಲೆಯ ವನ್​ಜಾರ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದ್ದು, ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಎಲೆಕ್ಟ್ರಿಕಲ್​ ವಸ್ತುವಿನ ಡೆಲಿವರಿ ಸ್ವೀಕರಿಸಿ, ಅದನ್ನು ತೆರೆಯುವ ವೇಳೆ ಈ ದುರ್ಘಟನೆ ಸಂಭವಿಸಿತು ಎಂದು ಮೃತರ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ಅನಾಮಧೇಯ ವ್ಯಕ್ತಿಯೊಬ್ಬ ತಂದುಕೊಟ್ಟ ಈ ಪಾರ್ಸೆಲ್​ ಅನ್ನು ಯಾರು ಬುಕ್ ಮಾಡಿದ್ದರು ಎಂಬುದು ಗೊತ್ತಿಲ್ಲ. ಡೆಲಿವರಿ ಪಡೆದ ಬಳಿಕ ಅದನ್ನು ತಂದೆ-ಮಗಳು ಓಪನ್ ಮಾಡಿದರು. ಆಗ ದಿಢೀರ್​ ಸ್ಪೋಟಗೊಂಡಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನೆಯಲ್ಲಿ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಪುತ್ರಿ ಗಂಭೀರ ಗಾಯಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ, ಕೊನೆಯುಸಿರೆಳೆದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net