

ಬೆಂಗಳೂರು ಸೇಂಟ್ರಲ್ ಸಂಸದ ಪಿ.ಸಿ.ಮೋಹನ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕರೊನಾ ವಾರ್ಡ್ನಲ್ಲಿ ಬಳಸಲು ವೈಯಕ್ತಿಕ ರಕ್ಷಣಾ ಸಲಕರಣೆ, ಕಿಟ್, ವೆಂಟಿಲೆಟರ್ ಎನ್95 ಮಾಸ್ಕ್ ಮತ್ತು ಇತರ ತುರ್ತು ಖರೀದಿಗೆ ಬಳಸಿಕೊಳ್ಳಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ದೇಣಿಗೆ ನೀಡಿದ್ದಾರೆ.
ಗುರುವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದ ಪಿ.ಸಿ.ಮೋಹನ್ 2 ಕೋಟಿ ರೂ. ನೀಡುವ ಪತ್ರವನ್ನು ನೀಡಿದರು. ಈ ವೇಳೆ ಸಚಿವರಾದ ಲಕ್ಷ್ಮಣ ಸವದಿ, ಡಾ.ಸುಧಾಕರ್, ಆರ್.ಅಶೋಕ್ ಇದ್ದರು.