ಬಿಳಿಗೆರೆ ಸಂಘಕ್ಕೆ 2.16 ಲಕ್ಷ ರೂ. ಲಾಭ

IMG-20240919-WA0030
ನಂಜನಗೂಡು ತಾಲೂಕು ಬಿಳಿಗೆರೆ ಪ್ರಾ. ಕೃ. ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಜಿಮಾರಹಳ್ಳಿ ರವಿ ಉದ್ಘಾಟನೆ ಮಾಡಿದರು. ಎಚ್.ಎಲ್. ಮಹದೇವಸ್ವಾಮಿ ಮತ್ತು ಸದಸ್ಯರು ಇದ್ದರು.
Published on

ಕಲ್ಕುಂದ: ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 2,17,049 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜೀಮಾರಹಳ್ಳಿ ರವಿ ತಿಳಿಸಿದರು.

ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2023-24ನೇ ಸಾಲಿನಲ್ಲಿ 6.25 ಕೋಟಿ ಬೆಳೆ ಸಾಲ, 7.50 ಲಕ್ಷ ರೂ. ಮಧ್ಯಮಾವಧಿ ಸಾಲ, 30.24 ಲಕ್ಷ ರೂ. ಹೈನುಗಾರಿಕೆ ಸಾಲ ನೀಡಿದ್ದೇವೆ. ಸಾಲ ಪಡೆದ ಸಂಘದ ಸದ್ಯಸರು ಸಕಾಲಕ್ಕೆ ಮರುಪಾವತಿ ಮಾಡಿ ಸಂಘದ ಆರ್ಥಿಕಾಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಂಘವು ಸದಾ ರೈತರ ಏಳಿಗೆಗಾಗಿ ಶ್ರಮಿಸುತ್ತದೆ. ರೈತರು ಸಕಾಲದಲ್ಲಿ ಬೆಳೆ ಬೆಳೆಯಲು ತಕ್ಕ ಸಮಯಕ್ಕೆ ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ರೈತರು ಸಹಕಾರ ಸಂಘದಲ್ಲಿ ದೊರೆಯುವ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಎಚ್.ಎಲ್.ಮಹದೇವಸ್ವಾಮಿ 2023-24ನೇ ಸಾಲಿನಲ್ಲಿ ಸಂಘ ನಡೆಸಿರುವ ವಹಿವಾಟಿನ ಬಗ್ಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಸೊನಹಳ್ಳಿ ಡಾ.ಶಿವಣ್ಣ, ಸೋಮಣ್ಣ, ಜಿ.ಸಿ.ಶಿವಪ್ರಸಾದ್, ಜಿ.ಡಿ.ಮಹೇಶ್, ಕೆ. ಬಿ. ಚಂದ್ರಶೇಖರ್, ಶಿವಕುಮಾರ್, ಎಸ್. ಆರ್.ಲಕ್ಷ್ಮಣ ನಾಯಕ, ಜಗದೀಶ್, ಪಚ್ಚೆತಾಯಮ್ಮ, ನೀಲಮ್ಮ, ಗುಮಾಸ್ತೆ ರಮ್ಯಾ ಸಂಪತ್, ರೈತ ಮುಖಂಡರಾದ ಶ್ರೀಕಂಠಮೂರ್ತಿ, ಚಿಕ್ಕಸ್ವಾಮಿ, ಗುರುಸ್ವಾಮಿ, ನಂಜುಂಡಗೌಡ, ತಾಯೂರು ನಟರಾಜು, ಪರಶಿವಮೂರ್ತಿ, ಲಿಂಗರಾಜು, ಸೋಮಣ್ಣ, ಜಯಶೀಲ ಮೂರ್ತಿ, ಮಾದೇಗೌಡ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net